ಕರ್ನಾಟಕ

karnataka

ETV Bharat / state

9 ಕೊರೊನಾ ಪಾಸಿಟಿವ್ ಪ್ರಕರಣ: ಮೂವರು ಆಸ್ಪತ್ರೆಯಿಂದ ಬಿಡುಗಡೆ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೆ ದಾವಣಗೆರೆಯಲ್ಲಿ ಇಂದು 9 ಜನ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.

ಮೂವರು ಆಸ್ಪತ್ರೆಯಿಂದ ಬಿಡುಗಡೆ
ಮೂವರು ಆಸ್ಪತ್ರೆಯಿಂದ ಬಿಡುಗಡೆ

By

Published : Jun 11, 2020, 8:54 PM IST

Updated : Jun 11, 2020, 9:23 PM IST

ದಾವಣಗೆರೆ: ಜಿಲ್ಲೆಯಲ್ಲಿಂದು 4 ವರ್ಷದ ಮಗು ಸೇರಿ 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 3 ಜನ ಸೋಂಕಿತರು ಗುಣಮುಖರಾಗಿದ್ದಾರೆ.

ರೋಗಿ ಸಂಖ್ಯೆ- 6151 ಮಹಿಳೆ 27 ವರ್ಷ, 6152 ಪುರುಷ 38 ವರ್ಷ, 6153 ಮಹಿಳೆ 38 ವರ್ಷ, 6154 ಪುರುಷ 42 ವರ್ಷ, 6158 4 ವರ್ಷದ ಗಂಡು ಮಗು ಇವರೆಲ್ಲರೂ ರೋಗಿ ಸಂಖ್ಯೆ- 4837 ಸಂಪರ್ಕಿತರಾಗಿದ್ದಾರೆ.

ರೋಗಿ ಸಂಖ್ಯೆ- 6155 18 ವರ್ಷ ಯುವತಿ, 6156 62 ವರ್ಷದ ಮಹಿಳೆ, 6157 66 ವರ್ಷದ ಪುರುಷ ಈ ಮೂವರು ರಾಜಸ್ಥಾನದಿಂದ ಹಿಂದಿರುಗಿದವರು. ರೋಗಿ ಸಂಖ್ಯೆ- 6159ರ 64 ವರ್ಷದ ವೃದ್ದ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.

3 ಜನರು ಆಸ್ಪತ್ರೆಯಿಂದ ಬಿಡುಗಡೆ

ರೋಗಿ ಸಂಖ್ಯೆ- 4094, 4095, ಮತ್ತು 2417 ಇವರು ಸಂಪೂರ್ಣರಾಗಿ ಗುಣಮುಖರಾಗಿ ಇಂದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 223 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಈ ಪೈಕಿ 168 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 06 ಸಾವು ಸಂಭವಿಸಿದ್ದು, ಪ್ರಸ್ತುತ 49 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Last Updated : Jun 11, 2020, 9:23 PM IST

ABOUT THE AUTHOR

...view details