ಕರ್ನಾಟಕ

karnataka

ETV Bharat / state

ಮುಂಬೈಯಿಂದ ಗದಗ ಜಿಲ್ಲೆಗೆ ಬಂದರು ಮತ್ತೆ 65 ಪ್ರಯಾಣಿಕರು.. - migrate workers came to gadag

ರಾಜ್ಯಕ್ಕೆ ವಲಸೆ ಕಾರ್ಮಿಕರ ಆಗಮಿಸುತ್ತಿರುವ ಸಂಖ್ಯೆ ದ್ವಿಗುಣವಾಗುತ್ತಿದೆ. ಆದರೆ, ಹೀಗೆ ಬರುವ ಎಲ್ಲರನ್ನೂ ಪರೀಕ್ಷೆ ಮಾಡಿ ನಂತರ ಕ್ವಾರಂಟೈನ್ ಮಾಡಲಾಗುತ್ತಿದೆ.

65 migrate workers came to gadag
65 migrate workers came to gadag

By

Published : Jun 7, 2020, 2:34 PM IST

ಗದಗ :ಇಂದು ಮುಂಬೈಯಿಂದ ಮತ್ತೆ 65 ಜನ ಪ್ರಯಾಣಿಕರು ಜಿಲ್ಲೆಗೆ ಆಗಮಿಸಿದ್ದಾರೆ.

6 ದಿನಗಳಿಂದ ಮುಂಬೈನಿಂದ ಜಿಲ್ಲೆಗೆ ಆಗಮಿಸಿದ ಪ್ರಯಾಣಿಕರ ಸಂಖ್ಯೆ ಒಟ್ಟು 430. ಇಂದು ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದ ಮುಂಬೈ- ಗದಗ ಎಕ್ಸ್‌ಪ್ರೆಸ್‌ ರೈಲು ಸುಮಾರು 65 ಜನರನ್ನು ಹೊತ್ತು ತಂದಿದ್ದು ಸ್ಕ್ರೀನಿಂಗ್ ಕಾರ್ಯ ನಡೆಯುತ್ತಿದೆ.

ಜಿಲ್ಲೆಯಲ್ಲಿ ಐದು ಕ್ವಾರಂಟೈನ್ ಕೇಂದ್ರಗಳಿವೆ. ಸ್ಕ್ರೀನಿಂಗ್ ಬಳಿಕ ಎಲ್ಲರನ್ನೂ ಸರ್ಕಾರಿ ವಾಹನಗಳಲ್ಲಿ ಕ್ವಾರಂಟೈನ್‌ಗೆ ರವಾನಿಸಲಾಗುತ್ತದೆ. ಕೊಪ್ಪಳ, ಬಳ್ಳಾರಿ, ಧಾರವಾಡ ಜಿಲ್ಲೆಯ ಜನರನ್ನು ಪ್ರತ್ಯೇಕ ವಾಹನದಲ್ಲಿ ಜಿಲ್ಲಾಡಳಿತ ಕಳುಹಿಸುತ್ತಿದೆ. ಆಯಾ ಜಿಲ್ಲೆಯಲ್ಲಿ ಅವರನ್ನೆಲ್ಲ ಕ್ವಾರಂಟೈನ ಮಾಡಲಾಗುತ್ತದೆ.

ABOUT THE AUTHOR

...view details