4 ವರ್ಷದ ಬಾಲಕಿ ಸೇರಿ ಧಾರವಾಡ ಜಿಲ್ಲೆಯಲ್ಲಿ ಇಂದು 4 ಕೊರೊನಾ ಪ್ರಕರಣ ಪತ್ತೆ - Dharwad corona virus cases
ಕೋವಿಡ್ ಕಾವು ಧಾರವಾಡ ಜಿಲ್ಲೆಯಲ್ಲಿಯೂ ಮುಂದುವರೆದಿದ್ದು, ಇಂದು 4 ವರ್ಷದ ಬಾಲಕಿ ಸೇರಿ ಒಟ್ಟು 4 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
4 corona virus cases found in dharwad
ಧಾರವಾಡ: ಜಿಲ್ಲೆಯಲ್ಲಿ ರಾಜಸ್ಥಾನದಿಂದ ಬಂದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.
ನಾಲ್ಕು ವರ್ಷದ ಹೆಣ್ಣು ಮಗು ಮತ್ತು 14 ವರ್ಷದ ಬಾಲಕ ಸೇರಿ ಒಟ್ಟು ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಜಸ್ಥಾನದಿಂದ ಬಂದಿದ್ದ 46 ವರ್ಷದ ಪುರುಷ ಪಿ-5482, 42 ವರ್ಷದ ಮಹಿಳೆ ಪಿ-5483, 14 ವರ್ಷದ ಬಾಲಕ ಪಿ-5484 ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ನಾಲ್ಕು ವರ್ಷದ ಬಾಲಕಿ ಪಿ-5485 ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.