ಕರ್ನಾಟಕ

karnataka

ETV Bharat / state

ಬಂಟ್ವಾಳ: ಒಂದೇ ದಿನದಲ್ಲಿ 381 ಕೋವಿಡ್ ಪ್ರಕರಣ ಪತ್ತೆ - ಬಂಟ್ವಾಳ ಕೋವಿಡ್ ವರದಿ

ಬಂಟ್ವಾಳ ಪುರಸಭೆ ವ್ಯಾಪ್ತಿಯೊಂದರಲ್ಲಿಯೇ 70ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವುದು ಗುರುವಾರ ಗೊತ್ತಾಗಿದೆ. ಬುಧವಾರ ತಾಲೂಕಿನಲ್ಲಿ 93 ಮಂದಿಗೆ ಸೋಂಕು ತಗುಲಿತ್ತು.

381 corona cases found in bantwal today
381 corona cases found in bantwal today

By

Published : May 6, 2021, 11:13 PM IST

ಬಂಟ್ವಾಳ:ಇಂದು ಒಂದೇ ದಿನ 381 ಮಂದಿ ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ 1300ರಷ್ಟು ಸಕ್ರಿಯ ಪ್ರಕರಣಗಳು ಬಂಟ್ವಾಳದಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ.

ಸೋಂಕು ತಗುಲಿದವರ ಪೈಕಿ 356 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಂಟ್ವಾಳ ಪುರಸಭೆ ವ್ಯಾಪ್ತಿಯೊಂದರಲ್ಲಿಯೇ 70ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವುದು ಗುರುವಾರ ಗೊತ್ತಾಗಿದೆ. ಬುಧವಾರ ತಾಲೂಕಿನಲ್ಲಿ 93 ಮಂದಿಗೆ ಸೋಂಕು ತಗುಲಿತ್ತು. ಈ ಹಿನ್ನೆಲೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮನವಿ ಮಾಡಿದ್ದಾರೆ.

ABOUT THE AUTHOR

...view details