ಕಲಬುರ್ಗಿ :ಹೆಮ್ಮಾರಿ ಕೊರೊನಾ ಜಿಲ್ಲೆಯಲ್ಲಿ ತನ್ನ ಅಟ್ಟಹಾಸ ಮುಂದುವರಿಸಿದೆ. ಸೌದಿ ಅರೇಬಿಯಾದಿಂದ ವಾಪಸಾದ ಇಬ್ಬರು ಸೇರಿ ಇಂದು ಮತ್ತೆ 39 ಜನರಲ್ಲಿ ಸೋಂಕು ಕಾಣಿಸಿದೆ.
ಶರಣರ ನಾಡಿಗೆ 'ಮಹಾ'ಕಂಟಕ.. ಇಂದು 39 ಸೋಂಕಿತರು ಪತ್ತೆ - ಕೊರೊನಾ ವೈರಸ್
ಮಹಾರಾಷ್ಟ್ರದಿಂದ ಕಲಬುರ್ಗಿ ಜಿಲ್ಲೆಗೆ ಬಂದ ಜನರಲ್ಲಿಯೇ ಹೆಚ್ಚಾಗಿ ಸೋಂಕು ಕಾಣಿಸಿದೆ. ಒಟ್ಟು ಸೋಂಕಿತರ ಸಂಖ್ಯೆ 660ಕ್ಕೆ ಏರಿಕೆಯಾಗಿದೆ.
30 corona cases found in kalaburagi district
9 ಜನ ಮಕ್ಕಳು, 12 ಮಹಿಳೆಯರು, 18 ಪುರುಷರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರಿಬ್ಬರು ಸೌದಿಯಿಂದ ವಾಪಸಾದವರಾಗಿದ್ರೆ, (4 ವರ್ಷದ ಮಗು ಮತ್ತು 33 ವರ್ಷದ ಮಹಿಳೆ) ಇನ್ನುಳಿದವರು ಮಹಾರಾಷ್ಟ್ರದಿಂದ ಬಂದ ವಲಸಿಗರಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 660ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಬಂದವರಲ್ಲಿಯೇ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.