ಕರ್ನಾಟಕ

karnataka

ETV Bharat / state

ಜಿಪಂ ಫೇಸ್‌ಬುಕ್‌ ಪೇಜ್ ಫಾಲೋವರ್ಸ್‌ ಹೆಚ್ಚಿಸುವ ಸ್ಪರ್ಧೆ.. ಶಿವಮೊಗ್ಗ ಶೈನಿಂಗ್!! - ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ

ಈ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ 18,354 ಹಿಂಬಾಲಕರನ್ನು ಹೊಂದುವ ಮೂಲಕ ರಾಜ್ಯದ ಪ್ರಥಮ ಸ್ಥಾನಕ್ಕೆ ಏರಿದೆ. 18,193 ಹಿಂಬಾಲಕರನ್ನು ಹೊಂದುವ ಮೂಲಕ ಮಂಡ್ಯ ಜಿಲ್ಲೆ ದ್ವೀತಿಯ ಸ್ಥಾನದಲ್ಲಿದೆ..

ಜಿಪಂ ಫೇಸ್‌ಬುಕ್‌ ಪೇಜ್
ಜಿಪಂ ಫೇಸ್‌ಬುಕ್‌ ಪೇಜ್

By

Published : Sep 21, 2020, 10:15 PM IST

ಶಿವಮೊಗ್ಗ:ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಿಲ್ಲಾವಾರು ಫೇಸ್‌ಬುಕ್‌ ಪೇಜ್​ನಲ್ಲಿ 18,354 ಹಿಂಬಾಲಕರನ್ನು ಹೊಂದುವ ಮೂಲಕ ಶಿವಮೊಗ್ಗ ಜಿಲ್ಲಾ ಪಂಚಾಯತ್ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ.

ಗ್ರಾಮೀಣಾಭಿವೃದ್ಧಿ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯು ಜುಲೈ 16ರಿಂದ ಸೆ.15ರವರೆಗೆ ಜಿಲ್ಲಾ ಪಂಚಾಯತ್ ಫೇಸ್‌ಬುಕ್‌ ಪೇಜ್​ನಲ್ಲಿ ಹಿಂಬಾಲಕರನ್ನು ಹೆಚ್ಚಿಸುವ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ 18,354 ಹಿಂಬಾಲಕರನ್ನು ಹೊಂದುವ ಮೂಲಕ ರಾಜ್ಯದ ಪ್ರಥಮ ಸ್ಥಾನಕ್ಕೆ ಏರಿದೆ. 18,193 ಹಿಂಬಾಲಕರನ್ನು ಹೊಂದುವ ಮೂಲಕ ಮಂಡ್ಯ ಜಿಲ್ಲೆ ದ್ವೀತಿಯ ಸ್ಥಾನದಲ್ಲಿದೆ.

ಶಿವಮೊಗ್ಗ ಜಿಲ್ಲಾ ಪಂಚಾಯತ್ ರಾಜ್ಯಕ್ಕೆ ಮೊದಲ ಸ್ಥಾನ

ಈ ಕುರಿತು ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ ಅವರು, ಫೇಸ್‌ಬುಕ್‌ ಮೂಲಕ ಜಿಲ್ಲಾ ಪಂಚಾಯತ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸಲು ಹೆಚ್ಚು ಅನುಕೂಲ ವಾಗುತ್ತದೆ. ಜಿಲ್ಲಾ ಪಂಚಾಯತ್ ಪೇಜ್‌ಗೆ ಲೈಕ್ ಮಾಡಿ ಹಿಂಬಾಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ABOUT THE AUTHOR

...view details