ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಕೋರಂ ಕೊರತೆಯಿಂದ ರದ್ದಾದ ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆ

ಜಿಲ್ಲಾ ಪಂಚಾಯತ್​​ ಸಾಮಾನ್ಯ ಸಭೆ ಇರುವ ಕುರಿತು ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಜಿಲ್ಲಾ ಪಂಚಾಯತ್​ ಸದಸ್ಯರಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ. ಮಾಹಿತಿ ಇದ್ದರೂ ಬಿಜೆಪಿ ಸದಸ್ಯರು ಗೈರಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.

zilla panchayat meeting postponed at shimoga
ಕೋರಂ ಕೊರತೆಯಿಂದ ರದ್ದಾದ ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆ

By

Published : Jun 30, 2020, 7:10 PM IST

ಶಿವಮೊಗ್ಗ: ಕೋರಂ ಕೊರತೆಯಿಂದಾಗಿ ನಗರದ ಜಿಲ್ಲಾ ಪಂಚಾಯತ್​ನಲ್ಲಿ ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ಸಾಮಾನ್ಯ ಸಭೆ ಜುಲೈ 3ರಂದು ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿ ಸದಸ್ಯರು ಗೈರು: ಪೂರ್ವ ನಿಗದಿಯಂತೆ ಇವತ್ತು ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಸಭೆ ಆರಂಭವಾಯಿತು. ಆದರೆ ಬಿಜೆಪಿ ಸದಸ್ಯರೆಲ್ಲರೂ ಸಾಮೂಹಿಕವಾಗಿ ಗೈರಾಗಿದ್ದರಿಂದ ಕೋರಂ ಕೊರತೆ ಕಂಡು ಬಂತು. ನಂತರ ಸುಮಾರು ಒಂದು ಗಂಟೆ ಸಭೆ ಮುಂದೂಡಲಾಯಿತು. ಆ ಬಳಿಕ ಸಭೆ ಸೇರಿದಾಗಲೂ ಕೋರಂ ಕೊರತೆ ಉಂಟಾಯಿತು.

ಕೋರಂ ಕೊರತೆಯಿಂದ ರದ್ದಾದ ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆ

ಸಭೆ ಮುಂದೂಡಿದ ಅಧ್ಯಕ್ಷರು:ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಜಿಲ್ಲಾ ಪಂಚಾಯತ್​​ ಸದಸ್ಯರು ಸೇರಿ ಒಟ್ಟು 50 ಮಂದಿ ಸಭೆಯಲ್ಲಿ ಇರಬೇಕಿತ್ತು. ಆದರೆ 19 ಮಂದಿಯಷ್ಟೇ ಸಭೆಯಲ್ಲಿದ್ದರು. ಹಾಗಾಗಿ ಸಭೆಯನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯತ್​​ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ತಿಳಿಸಿದರು.

ಕುತೂಹಲ ಕೆರಳಿಸಿದ ನಡೆ:ಜಿಲ್ಲಾ ಪಂಚಾಯತ್​​ ಸಾಮಾನ್ಯ ಸಭೆ ಇರುವ ಕುರಿತು ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಜಿಲ್ಲಾ ಪಂಚಾಯತ್​ ಸದಸ್ಯರಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ. ಮಾಹಿತಿ ಇದ್ದರೂ ಸದಸ್ಯರು ಗೈರಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಜಿಲ್ಲಾ ಪಂಚಾಯತ್​ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇವತ್ತು ಬಿಜೆಪಿ ಸದಸ್ಯರು ಸಾಮೂಹಿಕವಾಗಿ ಗೈರಾಗಿರುವುದು ಇದೇ ಕಾರಣಕ್ಕೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಜುಲೈ 3ರಂದು ನಡೆಯಲಿರುವ ಸಭೆ ತೀವ್ರ ಕುತೂಹಲ ಮೂಡಿಸಿದೆ.

ABOUT THE AUTHOR

...view details