ಕರ್ನಾಟಕ

karnataka

ETV Bharat / state

ಶಿವಮೊಗ್ಗ ಯುವ ದಸರಾದಲ್ಲಿ ಡೈಲಾಗ್ ಮೂಲಕ ರಂಜಿಸಿದ ನಟ ಪ್ರಮೋದ್ ಶೆಟ್ಟಿ - Youth Dasara program organized in Shimoga

ಶಿವಮೊಗ್ಗದಲ್ಲಿ ಆಯೋಜಿಸಿದ್ದ ಯುವ ದಸರಾ ಕಾರ್ಯಕ್ರಮವನ್ನು ನಟ ಪ್ರಮೋದ್ ಶೆಟ್ಟಿ ಉದ್ಘಾಟಿಸಿ, 'ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ 'ಹೇ ಭುಜಂಗ ಬಾರೋ ಇಲ್ಲಿ, ಉಗ್ರ ಹೋರಾಟ ಮಾಡೋದಿದೆ..' ಎಂಬ ಡೈಲಾಗ್ ಹೇಳುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.

ಪ್ರಮೋದ್ ಶೆಟ್ಟಿ
ಪ್ರಮೋದ್ ಶೆಟ್ಟಿ

By

Published : Oct 15, 2021, 6:58 AM IST

ಶಿವಮೊಗ್ಗ: ನಾಡಹಬ್ಬ ದಸರಾ ಪ್ರಯುಕ್ತ ನಗರದ ಫ್ರೀಡಂಪಾರ್ಕ್​ನಲ್ಲಿ ಆಯೋಜಿಸಿದ್ದ ಯುವ ದಸರಾ ಕಾರ್ಯಕ್ರಮವನ್ನು ನಟ ಪ್ರಮೋದ್ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ 'ಕಿರಿಕ್ ಪಾರ್ಟಿ' ಹಾಗೂ 'ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಡೈಲಾಗ್‌ಗಳನ್ನು ಹೇಳಿದರು. ಮುಖ್ಯವಾಗಿ, 'ಹೇ ಭುಜಂಗ ಬಾರೋ ಇಲ್ಲಿ, ಉಗ್ರ ಹೋರಾಟ ಮಾಡೋದಿದೆ' ಎಂಬ ಜನಪ್ರಿಯ ಸಂಭಾಷಣೆ ಪ್ರೇಕ್ಷಕರನ್ನು ಮುದಗೊಳಿಸಿತು.

ಶಿವಮೊಗ್ಗದಲ್ಲಿ ಯುವ ದಸರಾ ಕಾರ್ಯಕ್ರಮ

ಮಹಾನಗರ ಪಾಲಿಕೆ ವತಿಯಿಂದ ಪ್ರಮೋದ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಈ ವೇಳೆ ಸಂಸದ ಬಿ.ವೈ ರಾಘವೇಂದ್ರ, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ABOUT THE AUTHOR

...view details