ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ನಗ್ನ ಫೋಟೋ ಪಡೆದು ಯುವಕನಿಂದ ವೈರಲ್​ ಬೆದರಿಕೆ - ಶಿವಮೊಗ್ಗ ಲವರ್ಸ್ ಕೇಸ್​

ಸಂತೋಷ್ ಯುವತಿಗೆ ಫೋನ್ ಮಾಡಿ ಮಾತನಾಡಲು ಪ್ರಯತ್ನ ಮಾಡಿದ್ದಾನೆ. ಆದರೆ, ಸ್ಪಂದಿಸದ ಕಾರಣ ಆಕೆಯ ತಾಯಿಯ ಫೋನ್ ನಂಬರ್ ಪಡೆದು ಅವರಿಗೆ ಯುವತಿಯ ನಗ್ನ ಫೋಟೋ ಕಳುಹಿಸಿದ್ದಾನೆ. ಇದರಿಂದ ಬೇಸತ್ತ ಯುವತಿಯು ಸಿಇಎನ್ ಪೊಲೀಸ್ ಠಾಣೆಗೆ ಸಂತೋಷ್ ವಿರುದ್ದ ದೂರು ದಾಖಲಿಸಿದ್ದಾಳೆ..

young woman filed complaint-against-lover-for-photo-viral-threat
ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ನಗ್ನ ಪೋಟೋ ಪಡೆದ ಯುವಕನ ವಿರುದ್ಧ ದೂರು

By

Published : Feb 11, 2022, 7:29 PM IST

ಶಿವಮೊಗ್ಗ :ಪ್ರೀತಿಸಿದ್ದ ಯುವತಿ ತನ್ನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಿಲ್ಲ ಎಂದು ಪ್ರಿಯಕರ ಆಕೆಯ ನಗ್ನ ಫೋಟೋ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ಯುವತಿಗೆ ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಕಾರವಾರದ ಸಂತೋಷ್ ಎಂಬಾತ ಪರಿಚಯವಾಗಿದ್ದ. ಬಳಿಕ ಪರಿಚಯವು ಪ್ರೇಮಕ್ಕೆ ತಿರುಗಿದೆ. ನಂತರ ಸಂತೋಷ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಈ ನಡುವೆ ಒತ್ತಾಯ ಪೂರ್ವಕವಾಗಿ ಯುವತಿಯ ಬೆತ್ತಲೆ ಫೋಟೋವನ್ನು ಪಡೆದಿದ್ದ.

ಆದರೆ, ಈ ಫೋಟೋವನ್ನೇ ಬಳಸಿಕೊಂಡ ಸಂತೋಷ್, ಪ್ರತಿನಿತ್ಯ, ನಗ್ನ ಫೋಟೋಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಸಂತೋಷ್​​ಗೆ ಫೋನ್ ಮಾಡುವುದನ್ನೇ ಬಿಟ್ಟಿದ್ದಳು.

ಹೀಗಾಗಿ, ಸಂತೋಷ್ ಯುವತಿಗೆ ಫೋನ್ ಮಾಡಿ ಮಾತನಾಡಲು ಪ್ರಯತ್ನ ಮಾಡಿದ್ದಾನೆ. ಆದರೆ, ಸ್ಪಂದಿಸದ ಕಾರಣ ಆಕೆಯ ತಾಯಿಯ ಫೋನ್ ನಂಬರ್ ಪಡೆದು ಅವರಿಗೆ ಯುವತಿಯ ನಗ್ನ ಫೋಟೋ ಕಳುಹಿಸಿದ್ದಾನೆ. ಇದರಿಂದ ಬೇಸತ್ತ ಯುವತಿಯು ಸಿಇಎನ್ ಪೊಲೀಸ್ ಠಾಣೆಗೆ ಸಂತೋಷ್ ವಿರುದ್ದ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ:ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಸುಲಿಗೆ.. ನೀವು ಮನೆಯಲ್ಲಿ ಒಬ್ಬರೇ ವಾಸ ಮಾಡ್ತೀರಾ? ಹಾಗಿದ್ರೆ ಎಚ್ಚರ!

ABOUT THE AUTHOR

...view details