ಶಿವಮೊಗ್ಗ:ಮದುವೆಯಾಗಲು ನಿರಾಕರಿಸಿದ ಪ್ರೇಯಸಿಗೆಪ್ರಿಯಕರನೊಬ್ಬ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯ ಚೇತನ್ (28) ಚಾಕು ಇರಿದ ಪ್ರಿಯಕರ. ಅದೇ ಗ್ರಾಮದ ಯುವತಿ ಚಾಕು ಇರಿತಕ್ಕೊಳಗಾದ ಪ್ರೇಯಸಿ. ಕಳೆದ ಏಳು ವರ್ಷಗಳಿಂದ ಚೇತನ್ ಯುವತಿ ಪ್ರೀತಿಸುತ್ತಿದ್ದ. ಯುವತಿ ಮದುವೆಗೆ ನಿರಾಕರಿಸಿದ್ದರಿಂದ ಕೋಪಗೊಂಡ ಚೇತನ್ ಇಂದು ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ.
ಗಾಯಾಳು ಯುವತಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇತನ್ಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಇದರಿಂದ ಚೇತತ್ ತಲೆ ಭಾಗಕ್ಕೆ ಗಾಯಗಳಾಗಿವೆ. ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಗೆ ಚಾಕು ಇರಿದ ಆರೋಪಿ ಚೇತನ್ ಮಾತನಾಡಿ, "ತಾನು ಕಳೆದ 7 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದೆ. ಮೊದಲು ಆಕೆಗೆ ಲವ್ ಪ್ರಪೋಸ್ ಮಾಡಿದೆ. ಆಗ ಆಕೆ ನನ್ನ ಪ್ರೀತಿಯನ್ನು ನಿರಾಕರಿಸಿದಳು. ಕೆಲ ದಿನಗಳ ನಂತರ ನನ್ನನ್ನು ಪ್ರೀತಿಸುವುದಾಗಿ ತಿಳಿಸಿದಳು. ಈ ವಿಚಾರ ಆಕೆಯ ಮನೆಯವರಿಗೂ ತಿಳಿದಿತ್ತು. ನಾನು ಅವರ ಮನೆಗೆ ಆಗಾಗ್ಗ ಹೋಗುತ್ತಿದೆ. ನಾನು ಅವಳ ತಮ್ಮನಿಗೆ ವ್ಯವಹಾರಕ್ಕೆ ಹಣ ನೀಡಿದ್ದೇನೆ. ನಾನು ಯುವತಿಯನ್ನು ಮದುವೆಗೆಯಾಗಲು ಬಯಸಿದ್ದೆ" ಎಂದರು.