ಶಿವಮೊಗ್ಗ :ನದಿಯಲ್ಲಿ ಎತ್ತುಗಳಿಗೆ ನೀರು ಕುಡಿಸಲು ಹೋದ ವ್ಯಕ್ತಿಯೋರ್ವ ನೀರು ಪಾಲಾಗಿರುವ ಘಟನೆ ಸೊರಬ ತಾಲೂಕು ಭದ್ರಾಪುರ ಗ್ರಾಮದಲ್ಲಿ ನಡೆದಿದೆ. ಭದ್ರಾಪುರದ ಮಹೇಶ್ (25) ಎಂಬುವರು ತನ್ನ ಮನೆಯ ಎತ್ತುಗಳಿಗೆ ವರದಾ ನದಿಗೆ ನೀರು ಕುಡಿಸಲು ಹೋದಾಗ ನಿನ್ನೆ ಸಂಜೆ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿದ್ದಾನೆ.
ಎತ್ತುಗಳಿಗೆ ನೀರು ಕುಡಿಸಲು ಹೋದ ವ್ಯಕ್ತಿ ನೀರುಪಾಲು - ಅಗ್ನಿ ಶಾಮಕದಳ ಸಿಬ್ಬಂದಿ
ಗುರುವಾರ ಸಂಜೆ ಎತ್ತುಗಳಿಗೆ ನೀರು ಕುಡಿಸಲು ವರದಾ ನದಿಗೆ ತೆರಳಿದ್ದಾಗ ಕಾಲು ಜಾರಿ ವ್ಯಕ್ತಿಯೊಬ್ಬ ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ಮುಳುಗಿದ್ದ ಯುವಕನಿಗಾಗಿ ಶೋಧ ಕಾರ್ಯ ಕೈಗೊಂಡಿದ್ದ ಅಗ್ನಿ ಶಾಮಕದಳ ಸಿಬ್ಬಂದಿ ಮೃತ ಯುವಕನ ಶವವನ್ನು ನದಿಯಿಂದ ಇಂದು ಹೊರಗೆ ತೆಗೆದಿದ್ದಾರೆ..
ಸಂಗ್ರಹ ಚಿತ್ರ
ನದಿಯಲ್ಲಿ ಹರಿವು ಹೆಚ್ಚಾದ ಕಾರಣ ಶವದ ಹುಡುಕಾಟ ನಡೆಸಿರಲಿಲ್ಲ. ಇಂದು ಅಗ್ನಿ ಶಾಮಕ ದಳ ಸಿಬ್ಬಂದಿ ಶವದ ಹುಡುಕಾಟ ಮುಂದುವರೆಸಿದ್ದು, ಮಹೇಶ್ ಶವ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮೃತ ಯುವಕನ ಶವವನ್ನು ನದಿಯಿಂದ ಹೊರಗೆ ತೆಗೆದಿದ್ದಾರೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.