ಕರ್ನಾಟಕ

karnataka

ETV Bharat / state

ಪಕ್ಷದ ವಿರುದ್ಧ ಮಾತಾಡುವುದರಿಂದ ನೀವು ಮಂತ್ರಿಯಾಗಲ್ಲ.. ಹಳ್ಳಿಹಕ್ಕಿಗೆ ಸಚಿವ ಈಶ್ವರಪ್ಪ ಟಾಂಗ್ - ಎಂಎಲ್​ಸಿ ವಿಶ್ವನಾಥ್ ವಿರುದ್ಧ ಈಶ್ವರಪ್ಪ ವಾಗ್ದಾಳಿ

ನಿಮ್ಮನ್ನು ಶಾಸಕರು ಹಾಗೂ ಎಂಎಲ್​ಸಿಗಳಾಗಿ ಮಾಡಿರುವುದು ನಮ್ಮ ಪಕ್ಷದ ಕಾರ್ಯಕರ್ತರು. ಅವರಿಗೆ ನೋವುಂಟು ಮಾಡಬೇಡಿ..

party
ಈಶ್ವರಪ್ಪ ಟಾಂಗ್

By

Published : Dec 2, 2020, 1:46 PM IST

Updated : Dec 2, 2020, 3:06 PM IST

ಶಿವಮೊಗ್ಗ :ಪಕ್ಷದ ವಿರುದ್ಧ ಹೇಳಿಕೆ ನೀಡುವುದರಿಂದ ನೀವು ಮಂತ್ರಿ ಆಗುವುದಿಲ್ಲ ಎಂದು ಪರೋಕ್ಷವಾಗಿ ಹೆಚ್ ವಿಶ್ವನಾಥ್‌ಗೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ‌.

ಪಕ್ಷದ ವಿರುದ್ಧ ಮಾತಾಡಿದ್ರೆ ನೀವು ಮಂತ್ರಿಯಾಗಲ್ಲ.. ಈಶ್ವರಪ್ಪ

ನಗರದಲ್ಲಿ ಮಾತನಾಡಿದ ಅವರು, ನಮಗೆ ಪೂರ್ಣ ಬಹುಮತ ನೀಡದೆ ಇರುವುದೇ ದುರಂತ. ಕಾಂಗ್ರೆಸ್-ಜೆಡಿಎಸ್ ಶಾಸಕರು ಅಂದಿನ ಸರ್ಕಾರದ ವಿರುದ್ಧ ಬೇಸತ್ತು ರಾಜೀನಾಮೆ ನೀಡಿ, ಬಿಜೆಪಿಗೆ ಬಂದು ಗೆದ್ದಿದ್ದಾರೆ.

ಅದನ್ನು ನಾನು ಅಲ್ಲಗಳೆಯುವುದಿಲ್ಲ. ಪಕ್ಷದ ವರಿಷ್ಠರು ಅವರಿಗೆ ಮಂತ್ರಿ ಸ್ಥಾನ ನೀಡುತ್ತಾರೆ. ಮಂತ್ರಿ ಸ್ಥಾನಕ್ಕಾಗಿ ಪಕ್ಷದ ವಿರುದ್ಧವೇ ಮಾತನಾಡುವುದು ತರವಲ್ಲ ಎಂದು ಸಚಿವ ಸ್ಥಾನ ಸಿಗದ ಅಸಮಾಧಾನಿತರಿಗೆ ಸಲಹೆ ನೀಡಿದರು.

ನಿಮ್ಮನ್ನು ಶಾಸಕರು ಹಾಗೂ ಎಂಎಲ್​ಸಿಗಳಾಗಿ ಮಾಡಿರುವುದು ನಮ್ಮ ಪಕ್ಷದ ಕಾರ್ಯಕರ್ತರು. ಅವರಿಗೆ ನೋವುಂಟು ಮಾಡಬೇಡಿ ಎಂದು ಮನವಿ ಮಾಡಿದರು.

Last Updated : Dec 2, 2020, 3:06 PM IST

ABOUT THE AUTHOR

...view details