ಶಿವಮೊಗ್ಗ:ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿ ಎಸ್.ಎಸ್.ಎಲ್.ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಪ್ರಾರಂಭಲಾಗುತ್ತದೆ. ಈ ಮೂಲಕ ರಾಜ್ಯಕ್ಕೆ ಶಿವಮೊಗ್ಗ ಮಾದರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ: ಕೆ.ಎಸ್.ಈಶ್ವರಪ್ಪ - ಯೋಗ ಶಿಕ್ಷಣ
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹಾಗೂ ಆತ್ಮಸ್ಥೈರ್ಯ ತುಂಬಲು ಯೋಗ ಸಹಕಾರಿಯಾಗುತ್ತದೆ. ಇದನ್ನು ಪ್ರಾರಂಭಿಸಲು ಯೋಗ ಶಿಕ್ಷಕರೇ ಸ್ಪೂರ್ತಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
![ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ: ಕೆ.ಎಸ್.ಈಶ್ವರಪ್ಪ yoga](https://etvbharatimages.akamaized.net/etvbharat/prod-images/768-512-10073919-528-10073919-1609423638038.jpg)
yoga
ನಗರದ ಕುವೆಂಪು ರಂಗ ಮಂದಿರದಲ್ಲಿ ನಡೆದ ಯೋಗ ಶಿಕ್ಷಕರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹಾಗೂ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗುತ್ತದೆ. ಇದನ್ನು ಪ್ರಾರಂಭಿಸಲು ಯೋಗ ಶಿಕ್ಷಕರೇ ಸ್ಪೂರ್ತಿ ಎಂದರು.
ಕೆ.ಎಸ್.ಈಶ್ವರಪ್ಪ
ನಮ್ಮ ಜಿಲ್ಲೆಯಲ್ಲಿ 610 ಶಾಲೆಗಳಿವೆ. ಇದರಲ್ಲಿ 490 ಯೋಗ ಶಿಕ್ಷಕರಿದ್ದಾರೆ. ಉಳಿದ 120 ಶಾಲೆಗಳಿಗೆ ಯೋಗ ಶಿಕ್ಷಕರನ್ನು ಖಾಸಗಿ ಯೋಗ ಕೇಂದ್ರದವರು ಕಳುಹಿಸಲಿದ್ದಾರೆ ಎಂದರು. ಈ ವೇಳೆ ಡಿಸಿ ಶಿವಕುಮಾರ್, ಡಿಡಿಪಿಐ ರಮೇಶ್ ಸೇರಿ ಯೋಗ ಶಿಕ್ಷಕರು ಹಾಜರಿದ್ದರು.