ಶಿವಮೊಗ್ಗ:ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಎರಡನೆ ಹಂತದ ಸಚಿವ ಸಂಪುಟ ರಚನೆಯಲ್ಲಾದರು ಸಚಿವೆ ಸ್ಥಾನ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ಯಾದವ ಸಮಾಜದ ಅಧ್ಯಕ್ಷ ಎಸ್ ಎಂ ಮೈಲಾರಪ್ಪ ಒತ್ತಾಯಿಸಿದರು.
ಯಾದವ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಿ.. ಎಸ್. ಎಂ ಮೈಲಾರಪ್ಪ ಆಗ್ರಹ - poornima srinivas
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ್ರೇ ಯಾದವ ಸಮಾಜಕ್ಕೆ ಸಚಿವ ಸ್ಥಾನ ನೀಡುವ ಆಶ್ವಾಸನೆ ನೀಡಿದ್ದರು. ಆದರೆ, ಈಗ ರಚಿಸಿದ ಸಚಿವ ಸಂಪುಟದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವೆ ಸ್ಥಾನ ನೀಡಿಲ್ಲ. 2ನೇ ಹಂತದಲ್ಲಾದರೂ ಸಚಿವ ಸ್ಥಾನ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಯಾದವ ಸಮಾಜದ ಅಧ್ಯಕ್ಷ ಎಸ್ ಎಂ ಮೈಲಾರಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ್ರೇ ಸಮಾಜದ ಪೀಠಾಧ್ಯಕ್ಷರಾದ ಯಾದವನಂದ ಸ್ವಾಮೀಜಿಯವರ ಸಮ್ಮುಖದಲ್ಲಿ ಸಮಾಜಕ್ಕೆ ಸ್ಥಾನ ನೀಡುವ ಆಶ್ವಾಸನೆ ನೀಡಿದ್ದರು. ಆದರೆ, ಈಗ ರಚಿಸಿದ ಸಚಿವ ಸಂಪುಟದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವೆ ಸ್ಥಾನ ನೀಡಿಲ್ಲ. ಹಾಗಾಗಿ ಎರಡನೇ ಹಂತದ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಾದರೂ ಸಚಿವೆ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಬಾರಿ ಮಳೆ ಬಂದು ಅನೇಕ ಕಡೆ ಪ್ರವಾಹದಿಂದ ಅನೇಕರು ಸಂತ್ರಸ್ತರಾಗಿದ್ದಾರೆ. ಹಾಗಾಗಿ ಶ್ರೀಕೃಷ್ಣ ಜಯಂತಿಯನ್ನ ಸರ್ಕಾರದ ಅನುದಾನದಲ್ಲಿ ಆಚರಿಸದೇ ಸರ್ಕಾರದಿಂದ ಬಂದ 25 ಸಾವಿರ ಅನುದಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದೇವೆ ಎಂದರು.