ಶಿವಮೊಗ್ಗ: ಕೊರೊನಾ ಕಾರ್ಮೋಡದ ಹಿನ್ನೆಲೆ ವಿಶ್ವವಿಖ್ಯಾತ ಜೋಗ ವೀಕ್ಷಣೆಯನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲಾಗಿದೆ. ಜೋಗದಲ್ಲಿ ಹೆಚ್ಚು ಜನ ಸೇರುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎಂಬ ಭೀತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಬಂದ್ ಮಾಡಿ ಆದೇಶ ನೀಡಿದ್ದಾರೆ.
ಕೊರೊನಾ ಕಾರ್ಮೋಡ: ವಿಶ್ವವಿಖ್ಯಾತ ಜೋಗ ವೀಕ್ಷಣೆ ಬಂದ್..! - coronavirus panic
ಕೊರೊನಾ ವೈರಸ್ ಭೀತಿ ಹಿನ್ನೆಲೆ ವಿಶ್ವವಿಖ್ಯಾತ ಜೋಗ ವೀಕ್ಷಣೆಯನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಿ ಶಿವಮೊಗ್ಗದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ವಿಶ್ವವಿಖ್ಯಾತ ಜೋಗ ವೀಕ್ಷಣೆ ಕಂಪ್ಲೀಟ್ ಲಾಕ್ಡೌನ್
ಕೊರೊನಾ ವೈರಸ್ ಇದೊಂದು ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಹಾಗಾಗಿ ಈ ವೈರಸ್ ಹರಡದಂತೆ ತಡೆಯಲು ಕೆಲವು ಮಾರ್ಗಗಳನ್ನು ಅನುಸರಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರವೂ ತಿಳಿಸಿದೆ. ಜೋಗಕ್ಕೆ ದೇಶ - ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಈ ಹಿನ್ನೆಲೆ ಮುನ್ನಾಚ್ಚರಿಕಾ ಕ್ರಮವಾಗಿ ಜೋಗ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ ಮೇರೆಗೆ ಜೋಗ ಜಲಪಾತವನ್ನು ಬಂದ್ ಮಾಡಲಾಗಿದೆ.