ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳುವಿನಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು.
ಶಿವಮೊಗ್ಗದಲ್ಲೂ ವಿಶ್ವ ಪರಿಸರ ದಿನದ ಆಚರಣೆ ಜೋರು - ಶಿವಮೊಗ್ಗದಲ್ಲಿ ಪರಿಸರ ದಿನಾಚರಣೆ
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹೊಸನಗರ ತಾಲೂಕಿನ ಅರಸಾಳುವಿನಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಗಿಡ ನೆಡುವ ಮೂಲಕ ಪರಿಸರ ಪ್ರೇಮ ಮೆರೆದರು.
![ಶಿವಮೊಗ್ಗದಲ್ಲೂ ವಿಶ್ವ ಪರಿಸರ ದಿನದ ಆಚರಣೆ ಜೋರು World environment day](https://etvbharatimages.akamaized.net/etvbharat/prod-images/768-512-03:37-kn-smg-01-worldenvironmentday-7204213-05062020153115-0506f-1591351275-35.jpg)
World environment day
ಇಂದು ವಿಶ್ವ ಪರಿಸರ ದಿನದ ನಿಮಿತ್ತ ಡಿಸಿ, ಅರಸಾಳುವಿನ ಅರಣ್ಯ ಇಲಾಖೆಯ ಆವರಣದಲ್ಲಿ ಗಿಡ ನೆಟ್ಟು ಪರಿಸರ ಪ್ರೇಮ ಮೆರೆದರು. ಈ ವೇಳೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ರವರು ಸಹ ಹಾಜರಿದ್ದು, ಡಿಸಿ ಶಿವಕುಮಾರ್ ಅವರ ಜೊತೆ ಗಿಡನೆಟ್ಟು, ಗಿಡಗಳಿಗೆ ನೀರುಣಿಸಿದರು. ಈ ಸಂದರ್ಭದಲ್ಲಿ ಹೊಸನಗರ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.