ಶಿವಮೊಗ್ಗ: ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಶಿವಮೊಗ್ಗದಲ್ಲಿಂದು ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಬಾಲ ಕಾರ್ಮಿಕ ನಿರ್ಮೂಲನೆಗಾಗಿ ಸರ್ಕಾರ ಹಾಗೂ ಇಲಾಖೆ ತೆಗೆದು ಕೊಂಡ ಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ವಾಹನಕ್ಕೆ ಚಾಲನೆ ನೀಡಲಾಯಿತು. ಶಿವಮೊಗ್ಗದ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಎಂ.ಎಂ.ಎಂ. ಮಹಾಸ್ವಾಮಿಯವರು ಜಾಥಾ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಶಿವಮೊಗ್ಗದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಜಾಥಕ್ಕೆ ಚಾಲನೆ!
ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಬಾಲ ಕಾರ್ಮಿಕ ನಿರ್ಮೂಲನೆಗಾಗಿ ಸರ್ಕಾರ ಹಾಗೂ ಇಲಾಖೆ ತೆಗೆದುಕೊಂಡ ಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ವಾಹನಕ್ಕೆ ಚಾಲನೆ ನೀಡಲಾಯಿತು.
ಜಾಥಾ ವಾಹನದಲ್ಲಿ ಬಾಲ ಕಾರ್ಮಿಕರ ನೇಮಕ ಮಾಡಿಕೊಂಡ್ರೆ, ಕಾನೂನಿನ ಪ್ರಕಾರ ಹಾಕುವ ದಂಡ ಹಾಗೂ ಶಿಕ್ಷೆಯ ಕುರಿತು ಮಾಹಿತಿ ಹಾಗೂ ಬಾಲ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದು ಕಂಡರೆ, ಮಾಹಿತಿ ತಿಳಿಸುವ ವಿಧಾನ ಹೀಗೆ ಹಲವು ವಿಷಯಗಳ ಕುರಿತು ಡಿಸ್ಪ್ಲೇ ಮಾಡಲಾಗಿದೆ.
ಇನ್ನು ಲೇಬರ್ ಇನ್ಸ್‌ಪೆಕ್ಟರ್ ವಿಶ್ವನಾಥ್ ಮಾತನಾಡಿ, ಪ್ರತಿ ವರ್ಷ ಜೂನ್ 12 ರಂದು ಬಾಲ ಕಾರ್ಮಿಕ ವಿರೋಧಿ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಓರ್ವ ಬಾಲ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದ್ದು, ಬಾಲಕನ ಮುಂದಿನ ಭವಿಷ್ಯಕ್ಕಾಗಿ ನೇಮಕ ಮಾಡಿಕೊಂಡಿದ್ದ ಮಾಲೀಕನಿಂದ 20 ಸಾವಿರ ರೂ. ಕೊಡಿಸಲಾಗಿದೆ ಎಂದರು. ಈ ವೇಳೆ ಡಿಸಿ ಶಿವಕುಮಾರ್, ಎಸ್ಪಿ ಶಾಂತರಾಜು ಸೇರಿ ಇತರರು ಹಾಜರಿದ್ದರು.
TAGGED:
ಬಾಲ ಕಾರ್ಮಿಕ ನಿರ್ಮೂಲನೆ