ಶಿವಮೊಗ್ಗ: ಇಂದು ಜಿಲ್ಲಾ ರೆಡ್ ಕ್ರಾಸ್ ಸಹಯೋಗದಲ್ಲಿ ನಗರದ ಡಿವಿಎಸ್ ರಂಗ ಮಂದಿರದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು. ರಕ್ತಗಳಲ್ಲಿ ಗುಂಪು ಇದೆ ಎಂದು ತೋರಿಸಿದ ಕಾರ್ಲ್ ಆರ್ನ್ ಸ್ಟೀನ್ ರವರ ಜನ್ಮ ದಿನಾಚರಣೆಯನ್ನು ವಿಶ್ವ ರಕ್ತದಾನಿಗಳ ದಿನಾಚರಣೆ ಎಂದು ಆಚರಿಸಲಾಗುತ್ತದೆ.
ಇಂದು ನಡೆದ ಕಾರ್ಯಕ್ರಮವನ್ನು ಎನ್ಇಎಸ್ ನ ಮುಖ್ಯಸ್ಥರಾದ ಅನಂತ ಶಾಸ್ತ್ರಿಗಳು ಗಿಡಕ್ಕೆ ನೀರು ಹಾಕುವ ಉದ್ಘಾಟಿಸಿದರು. 50 ಕ್ಕೂ ಹೆಚ್ಚು ರಕ್ತದಾನಿಗಳು ರಕ್ತವನ್ನು ದಾನ ಮಾಡಿದರು. ಕಾರ್ಯಕ್ರಮದಲ್ಲಿ 100 ನೇ ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ಅವರಿಗೆ ಸನ್ಮಾನ ಮಾಡಲಾಯಿತು. 15 ಕ್ಕೂ ಹೆಚ್ಚು ಜನರಿಗೆ ಗೌರವಿಸಲಾಯಿತು.