ಕರ್ನಾಟಕ

karnataka

ಗ್ರಾ.ಪಂಚಾಯತಿ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂದು ವಿಷ ಸೇವಿಸಿ‌ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

By

Published : Jun 16, 2022, 10:34 PM IST

Updated : Jun 16, 2022, 10:48 PM IST

ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎಂದು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗದ ದೊಣಬಘಟ್ಟದಲ್ಲಿ ನಡೆದಿದೆ.

women-suisde-attempt-in-shivamogga
ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂದು ವಿಷ ಸೇವಿಸಿ‌ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಶಿವಮೊಗ್ಗ: ಗ್ರಾಮ ಪಂಚಾಯತಿಯಲ್ಲಿ ತನಗೆ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭದ್ರಾವತಿ ತಾಲೂಕಿನ ದೊಣಬಘಟ್ಟದಲ್ಲಿ ನಡೆಯಿತು. ದೊಣಬಘಟ್ಟ ಗ್ರಾಮ ಪಂಚಾಯತಿಯಲ್ಲಿ ಇಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಈ ವೇಳೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಗ್ರಾಮ ಪಂಚಾಯತಿ ಸದಸ್ಯೆ ಕೌಸರ್ ಬಾನು ವಿಷ ಸೇವಿಸಿದ್ದಾರೆ.

ಗ್ರಾ.ಪಂಚಾಯತಿ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂದು ವಿಷ ಸೇವಿಸಿ‌ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಪಂಚಾಯಿತಿ ಅಧ್ಯಕ್ಷರಾಗಿ ಕಾಸಿಮ್ ಹಾಗೂ ಉಪಾಧ್ಯಕ್ಷರಾಗಿ ಮಾಲಮ್ಮ ಆಯ್ಕೆಯಾಗಿದ್ದಾರೆ. ಖಲೀಮ್ ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಿಂದೆ ಖಲೀಮ್ 14 ತಿಂಗಳು ಕೌಸರ್ ಭಾನು 14 ತಿಂಗಳು ಎಂಬ ಒಪ್ಪಂದದಂತೆ ಚುನಾವಣೆ ನಡೆಸಲಾಗಿತ್ತು.

ವಿಷ ಸೇವಿಸಿದ ಕೌಸರ್ ಬಾನುವನ್ನು ಭದ್ರಾವತಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:'ಕಾಂಗ್ರೆಸ್​ನವರು ಮಾತ್ರವಲ್ಲ, ಬಿಎಸ್​ವೈ, ಪುತ್ರ ವಿಜಯೇಂದ್ರ ಜೈಲಿಗೆ ಹೋಗುಯ ಸಮಯ ಬರಲಿದೆ'

Last Updated : Jun 16, 2022, 10:48 PM IST

For All Latest Updates

ABOUT THE AUTHOR

...view details