ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಯುವತಿವೋರ್ವಳು ಆಕಸ್ಮಿಕವಾಗಿ ತುಂಗಾ ನದಿಗೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ.
ಸಹನಾ(24) ನದಿಗೆ ಬಿದ್ದ ಯುವತಿ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಿಎ ಎಕ್ಸಾಂ ಬರೆಯಲು ತನ್ನ ತಾಯಿಯ ಜೊತೆ ಇಂಟರ್ ಸಿಟಿ ರೈಲಿನಲ್ಲಿ ಬರುವಾಗ ಈ ದುರ್ಘಟನೆ ಜರುಗಿದೆ.

ಶಿವಮೊಗ್ಗ ನಗರದ ತುಂಗಾ ನದಿಯ ರೈಲ್ವೆ ಬ್ರಿಡ್ಜ್ ಮೇಲೆ ರೈಲು ಸಂಚರಿಸುತ್ತಿದ್ದಾಗ ಯುವತಿ ಬಾಗಿಲ ಬಳಿ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿದ್ದಳಂತೆ. ಆ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ. ಯುವತಿಯ ತಂದೆ ಪತ್ನಿ ಹಾಗೂ ಮಗಳನ್ನು ಕರೆತರಲು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಘಟನೆ ನಂತರ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಬಂದಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ....