ಕರ್ನಾಟಕ

karnataka

ETV Bharat / state

ಶಿಕಾರಿಪುರ : ಕೆಲಸಕ್ಕೆ ಹೊರಟಿದ್ದ ಮಹಿಳೆಯ ಕತ್ತು ಸೀಳಿ ಕೊಲೆ - ಶಿಕಾರಿಪುರ ಮಹಿಳೆ ಕೊಲೆ

ಮಹಿಳೆಯು ಶಿಕಾರಿಪುರ ತಾಲೂಕಿನ ಸಂಡದ ಪಶು ಆಹಾರ ಘಟಕದಲ್ಲಿ ದಿನಗೂಲಿ ನೌಕರಳಾಗಿದ್ದಳು. ಕೊಲೆಗೆ ಅನೈತಿಕ ಸಂಬಂಧ ಕಾರಣ ಎನ್ನಲಾಗಿದೆ..

woman-murder-in-shikaripura
ಶಿಕಾರಿಪುರ: ಕೆಲಸಕ್ಕೆ ಹೊರಟಿದ್ದ ಮಹಿಳೆಯ ಕತ್ತು ಸೀಳಿ ಕೊಲೆ

By

Published : Oct 9, 2021, 8:19 PM IST

ಶಿವಮೊಗ್ಗ :ಕೆಲಸಕ್ಕೆಂದು ತೆರಳುತ್ತಿದ್ದ ಮಹಿಳೆಯನ್ನು ನಡು ರಸ್ತೆಯಲ್ಲಿಯೇ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಕ್ಯಾಂಪ್​ ಬಳಿ ನಡೆದಿದೆ. ಹೇಮಾವತಿ ಎಂಬ ಮಹಿಳೆಯು ಕೆಲಸಕ್ಕಾಗಿ ನಡೆದುಕೊಂಡು ಹೋಗುವ ವೇಳೆ ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದಾರೆ. ಮಹಿಳೆಯ ಕತ್ತು ಸೀಳಿ, ಮಚ್ಚನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ.

ಮಹಿಳೆಯು ಶಿಕಾರಿಪುರ ತಾಲೂಕಿನ ಸಂಡದ ಪಶು ಆಹಾರ ಘಟಕದಲ್ಲಿ ದಿನಗೂಲಿ ನೌಕರಳಾಗಿದ್ದಳು. ಕೊಲೆಗೆ ಅನೈತಿಕ ಸಂಬಂಧ ಕಾರಣ ಎನ್ನಲಾಗಿದೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಪ್ಪನ ಸಾಧನೆಗೆ ಪುತ್ರನೇ ಸಾಕ್ಷಿ.. ತಂದೆಯ ಪಿಹೆಚ್​ಡಿ ಪದವಿ ಸ್ವೀಕರಿಸಿದ 14ರ ಮಗ..

ABOUT THE AUTHOR

...view details