ಶಿವಮೊಗ್ಗ:ಜೋಗ ಪ್ರವಾಸಕ್ಕೆ ಬಂದಿದ್ದ ಮಹಿಳೆ ಕಾಲು ಜಾರಿ ಬಿದ್ದು ಸಾವಿಗೀಡಾಗಿರುವ ಘಟನೆ ಸಾಗರದ ತಳಕಳಲೆ ಡ್ಯಾಂನ ಹಿನ್ನೀರಿನಲ್ಲಿ ನಡೆದಿದೆ. ಬೆಂಗಳೂರು ಮೂಲದ ನಿಶಾ (24) ಮೃತ ದುರ್ದೈವಿಯಾಗಿದ್ದಾರೆ. ಇವರು ತಮ್ಮ ಪತಿ ನಾಗೇಶ್ ಅವರ ಜೊತೆ ಜೋಗ ವೀಕ್ಷಣೆಗೆ ಬಂದಿದ್ದರು. ಇವರು ಜೋಗ ಸಮೀಪದ ತಳಕಳಲೆ ಡ್ಯಾಂ ಬಳಿಯ ಜಂಗಲ್ ರೇಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು.
ತಳಕಳಲೆ ಡ್ಯಾಂ ಹಿನ್ನೀರಿನಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಸಾವು - ಬೆಂಗಳೂರು ಮೂಲದ ನಿಶಾ ಎಂಬ ಮಹಿಳೆ
ಬೆಂಗಳೂರು ಮೂಲದ ನಿಶಾ ಎಂಬ ಮಹಿಳೆ ಸಾಗರದ ತಳಕಳಲೆ ಡ್ಯಾಂನ ಹಿನ್ನೀರಿಗೆ ಹೋದಾಗ, ಅಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಬೆಂಗಳೂರು ಮೂಲದ ನಿಶಾ ಎಂಬ ಮಹಿಳೆ
ನಿಶಾ, ನಾಗೇಶ್ ಜೊತೆ ಕಳೆದ ಒಂದು ವರ್ಷದ ಹಿಂದಷ್ಟೆ ಮದುವೆಯಾಗಿದ್ದರು. ನಿನ್ನೆ ಜಂಗಲ್ ರೇಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಹಿನ್ನೀರಿನ ಬಳಿ ಹೋದಾಗ ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಅಲ್ಲಿನ ಸಿಬ್ಬಂದಿ ನಿಶಾರನ್ನು ಮೇಲಕ್ಕೆ ಎತ್ತಿ ಕಾರ್ಗಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ನಿಶಾ ಮೃತಪಟ್ಟಿದ್ದಾರೆ. ನಿಶಾ ಕುಟುಂಬದವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರ್ಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ದಿಢೀರ್ ಶಬ್ದದಿಂದ ಸೀಳು ಬಿಟ್ಟ ಭೂಮಿ.. ಭಯಭೀತರಾದ ಜನ