ಶಿವಮೊಗ್ಗ: ಕೌಟಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೊಬ್ಬಳು ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೋರಡಿ ಗ್ರಾಮದಲ್ಲಿ ನಡೆದಿದೆ. ಚೋರಡಿ ಗ್ರಾಮದ ನಿವಾಸಿ ಜ್ಯೋತಿ(25) , ಮಕ್ಕಳಾದ ಸಾನ್ವಿ (2) ಹಾಗೂ 11 ತಿಂಗಳ ಕುಶಾಲ್ ಸಾವಿಗೀಡಾದವರು.
ಕೌಟಂಬಿಕ ಕಲಹ: ಇಬ್ಬರು ಮಕ್ಕಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಾಯಿ - ಶಿವಮೊಗ್ಗದಲ್ಲಿ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೋರ್ವಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೌಟಂಬಿಕ ಕಲಹ ಹಿನ್ನೆಲೆ ಮೂವರ ಸಾವು
ಕೌಟುಂಬಿಕ ಕಲಹದಿಂದ ಘಟನೆ ನಡೆದಿರುವ ಕಾರಣ ಜ್ಯೋತಿ ಪತಿ ಶಿವಕುಮಾರ್ ಹಾಗೂ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಥಾಮಸ್ ಕಪ್ ಚಾಂಪಿಯನ್ಸ್ಗೆ ಪ್ರಧಾನಿ ಫೋನ್ ಕಾಲ್.. ಕ್ರೀಡಾ ಸಚಿವಾಲಯದಿಂದ ₹ 1 ಕೋಟಿ ಬಹುಮಾನ ಘೋಷಣೆ