ಶಿವಮೊಗ್ಗ:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ತನ್ನ ಇಬ್ಬರು ಮಕ್ಕಳೂಂದಿಗೆ ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ ನೆಹರು ನಗರದ ನಿವಾಸಿಗಳಾದ ಚಂದ್ರಕಲಾ(33) ತನ್ನ ಮಕ್ಕಳಾದ ಶ್ವೇತಾ(8) ಹಾಗೂ ರೋಹಿಣಿ(4) ಜೊತೆ ಭದ್ರಾವತಿಯ ಕೋಡಿಹಳ್ಳಿಯ ಭದ್ರಾ ಗೊಂದಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಂದ್ರಕಲಾ ಗಂಡ ಹಾಗೂ ಮನೆಯವರ ಕಿರುಕುಳದಿಂದ ಬೇಸತ್ತು ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಕುರಿತು ಚಂದ್ರಕಲಾ ಪತಿ ವೆಂಕಟೇಶ್ ವಿರುದ್ಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಂದ್ರಕಲಾರನ್ನ ನೋಡಲು ತಮಿಳುನಾಡಿನಿಂದ ಆಗಮಿಸಿದ್ದ 5 ಜನ ಸಂಬಂಧಿಕರಿಗೆ ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಿ, ಮೃತದೇಹಗಳನ್ನು ದೂರದಿಂದಲೇ ತೋರಿಸಿ ಕಳುಹಿಸಿದ್ದಾರೆ.