ಶಿವಮೊಗ್ಗ :ಜಮೀನು ವಿಚಾರವಾಗಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ.
ಕಾಗಿನೆಲ್ಲಿ ಗ್ರಾಮದ ಸುಶೀಲಮ್ಮ(43) ಎಂಬುವರು ವಿಷ ಸೇವಿಸಿ ಮೃತರಾಗಿದ್ದಾರೆ. ಸುಶೀಲಮ್ಮ ಅವರು ಶನಿವಾರ ವಿಷ ಸೇವಿಸಿದ್ದು, ಕೂಡಲೇ ಅವರನ್ನು ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಶೀಲಮ್ಮ ಮೃತರಾಗಿದ್ದಾರೆ.