ಶಿವಮೊಗ್ಗ:ಅವೈಜ್ಞಾನಿಕ ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಆಗ್ರಹಿಸಿ ನಾಳೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಹೋರಾಟ ಸಮಿತಿ ಅಧ್ಯಕ್ಷ ಕೆ.ಸಿ.ಟಾಕಪ್ಪ ಎಚ್ಚರಿಕೆ ನೀಡಿದರು.
ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಗ್ರಾಮಸ್ಥರಿಂದ ಪ್ರತಿಭಟನೆ
ಅವೈಜ್ಞಾನಿಕ ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಆಗ್ರಹಿಸಿ ಆಗಸ್ಟ್ 26ರಂದು ಸಾಗರದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಕೆ.ಸಿ.ಟಾಕಪ್ಪ ಹೇಳಿದರು.
ಅವೈಜ್ಞಾನಿಕ ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಗ್ರಾಮಸ್ಥರ ಆಗ್ರಹ
ಸಾಗರ ತಾಲೂಕಿನ ಮಜರೆಕುಂದೂರು ಬಳಿ ನಿರ್ಮಿಸಲು ಹೊರಟಿರುವ ಯೋಜನೆಯಿಂದ ನೂರಾರು ಕುಟುಂಬಗಳು ಅಲೆಮಾರಿಗಳಾಗುತ್ತವೆ. ಹಿಂದಿನ ಶರಾವತಿ ಯೋಜನೆಯಿಂದಾಗಿ ಸಂತ್ರಸ್ತರಾದವರೂ ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಸರ್ಕಾರ ಮತ್ತೆ ನಮ್ಮನ್ನು ಬೀದಿಗೆ ತಳ್ಳುತ್ತದೆ ಎಂದು ದೂರಿದರು.