ಶಿವಮೊಗ್ಗ: ತಾಲೂಕಿನ ಹೊಳೆಬೆನವಳ್ಳಿ ಗ್ರಾಮದ ಹೊರ ವಲಯದ ವೆಂಕಟೇಶ್ವರ ವೈನ್ಶಾಪ್ನಲ್ಲಿ ಕಳೆದ ವಾರ ಕಳ್ಳತನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ವೈನ್ಶಾಪ್ ಕಳ್ಳತನ ಮಾಡಿದ್ದ ಇಬ್ಬರ ಬಂಧನ: 26 ಸಾವಿರ ನಗದು ವಶಕ್ಕೆ - Theft Arrest
ಕಳೆದ ವಾರ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದ್ದ ವೈನ್ ಶಾಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ವೈನ್ ಶಾಪ್ ಕಳ್ಳತನ ಮಾಡಿದ್ದ ಇಬ್ಬರ ಬಂಧನ
ವೈನ್ಶಾಪ್ ಕಳ್ಳತನ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹಸೂಡಿಯ ರಮೇಶ್ (22) ಹಾಗೂ ಅಕ್ಬರ್ ಅಲಿಯಾಸ್ ರವಿ ಅಲಿಯಾ ಬೋಸ್ಲೆ (22) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 10,430 ರೂ. ಮೌಲ್ಯದ ಮದ್ಯದ ಬಾಟಲಿ ಮತ್ತು ಮದ್ಯದ ಪೌಚ್ ಜತೆಗೆ 26 ಸಾವಿರ ರೂ. ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.