ಕರ್ನಾಟಕ

karnataka

ಎಮ್ಮೆ ಮೇಯಿಸಲು ಹೋದ ಗೌಳಿಯ ಮೇಲೆ ಕರಡಿ ದಾಳಿ

ಎಮ್ಮೆ ಹುಡುಕಿಕೊಂಡು ಬರಲು ಕಾಡಿಗೆ ತೆರಳಿದ್ದ ವ್ಯಕ್ತಿಯೋರ್ವನ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬಳಿಯ ಗ್ರಾಮವೊಂದರಲ್ಲಿ ಜರುಗಿದೆ.

By

Published : Aug 22, 2020, 7:14 PM IST

Published : Aug 22, 2020, 7:14 PM IST

Updated : Aug 22, 2020, 8:30 PM IST

shimogha
ಕರಡಿ ದಾಳಿ

ಶಿವಮೊಗ್ಗ:ಎಮ್ಮೆ ಮೇಯಿಸಲು ಹೋದ ಗೌಳಿಯ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಶಿವಮೊಗ್ಗದ ಬಾಳಿಕಟ್ಟೆಯಲ್ಲಿ ನಡೆದಿದೆ.

ಕರಡಿ ದಾಳಿ

ಭದ್ರಾವತಿ ತಾಲೂಕು ದೊಡ್ಡೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಕಟ್ಟೆ ಗ್ರಾಮದ ಜಾನು ಎಂಬಾತ ಗೌಳಿಯಾಗಿದ್ದು, ಈತ ತನ್ನ ಎಮ್ಮೆಯನ್ನು ಹಿಡಿದುಕೊಂಡು ಬರಲು ಹೋದಾಗ ಕರಡಿ ದಾಳಿ ನಡೆಸಿದೆ.

ಕರಡಿಯ ದಾಳಿಯಿಂದ ಜಾನುವಿನ ಬಲ ಭಾಗದ ಕೆನ್ನೆ ಸಂಪೂರ್ಣ ಕಿತ್ತು ಹೋಗಿದೆ. ನಂತರ ಕರಡಿ ಜಾನುವಿನ ಕಾಲು ಹಾಗೂ ಬೆನ್ನಿಗೆ ಪರಚಿ ಗಾಯಮಾಡಿದೆ. ಬಾಳೆಕಟ್ಟೆ ಗ್ರಾಮದ ಪಕ್ಕದ ಕಾಡಿನಲ್ಲಿ ಗೌಳಿಗರು ಎಮ್ಮೆ ಮೇಯಿಸುವುದು ಸಾಮಾನ್ಯವಾಗಿದೆ. ಜಾನುವಿನ ಒಂದು ಎಮ್ಮೆ ಕಾಣೆಯಾಗಿತ್ತು. ಈ ವೇಳೆ ಜಾನು ಎಮ್ಮೆಯನ್ನು ಹುಡುಕಿ ಕೊಂಡು ಬಂಡೆ ಬಳಿ ಹೋದಾಗ ಕರಡಿ ದಾಳಿ ಮಾಡಿದೆ.

ಮರಿ ಹಾಕಿದ ಕರಡಿಯಿಂದ ದಾಳಿ:

ಜಾನುವಿನ ಮೇಲೆ ದಾಳಿ ನಡೆಸಿದ ಕರಡಿಯು ಮರಿ ಹಾಕಿದ ಕರಡಿಯಾಗಿದೆ. ಮರಿ ಹಾಕಿದ ಕರಡಿ ಬಳಿ ಯಾರೇ ಹೋದ್ರೂ ಕರಡಿ ದಾಳಿ ಮಾಡುವುದು ಸಾಮಾನ್ಯವಾಗಿದೆ. ಕರಡಿ ಬಳಿ ಜಾನು ಹೋದಾಗ ಕರಡಿ ತನ್ನ ಮರಿಯನ್ನು ತನ್ನಿಂದ ತೆಗೆದುಕೊಂಡು ಹೋಗುತ್ತಾರೆ ಎಂದು ಕೋಪಗೊಂಡು ದಾಳಿ ನಡೆಸಿದೆ.

ನಂತರ ಜಾನುವಿನ ಮಕ್ಕಳು ಓಡಿ ಬಂದು ಕರಡಿಯನ್ನು ಓಡಿಸಿದ್ದಾರೆ. ತಕ್ಷಣ ಜಾನುವನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳಿಸಲಾಗಿದೆ. ನಂತರ ಇಲ್ಲಿಯೂ ಚಿಕಿತ್ಸೆ ನೀಡದೆ ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಯಿತು. ಇನ್ನು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.

Last Updated : Aug 22, 2020, 8:30 PM IST

ABOUT THE AUTHOR

...view details