ಶಿವಮೊಗ್ಗ:ಕೊರೊನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಜಿಲ್ಲೆಯ ದಿನಸಿ ಸಗಟು ವ್ಯಾಪಾರಿಗಳು ಸ್ವಯಂ ಪ್ರೇರಿತ ಬಂದ್ಗೆ ಮುಂದಾಗಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ವ್ಯಾಪಾರ ನಡೆಸಿ ನಂತರ ಮಳಿಗೆಯನ್ನು ಮುಚ್ಚಲಿದ್ದಾರೆ.
ಕೊರೊನಾ ನಿಯಂತ್ರಣ ನಿರ್ಧಾರ: ಶಿವಮೊಗ್ಗದಲ್ಲಿ ದಿನಸಿ ಸಗಟು ವ್ಯಾಪಾರಿಗಳಿಂದ ಸ್ವಯಂ ಪ್ರೇರಿತ ಬಂದ್ - ದಿನಸಿ ಸಗಟು ವ್ಯಾಪಾರಿಗಳು ಸ್ವಯಂ ಪ್ರೇರಿತ ಬಂದ್
ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಶಿವಮೊಗ್ಗದ ದಿನಸಿ ಸಗಟು ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ಮಾದರಿಯಾಗಿದ್ದಾರೆ.
![ಕೊರೊನಾ ನಿಯಂತ್ರಣ ನಿರ್ಧಾರ: ಶಿವಮೊಗ್ಗದಲ್ಲಿ ದಿನಸಿ ಸಗಟು ವ್ಯಾಪಾರಿಗಳಿಂದ ಸ್ವಯಂ ಪ್ರೇರಿತ ಬಂದ್ wholesalers are self-Inspired bandh](https://etvbharatimages.akamaized.net/etvbharat/prod-images/768-512-7843140-1068-7843140-1593587717038.jpg)
ಸಗಟು ವ್ಯಾಪಾರಿಗಳು ರಾತ್ರಿ ತನಕ ವ್ಯಾಪಾರ ನಡೆಸಿದರೆ, ಜನ ಬರುತ್ತಾರೆ. ಹೆಚ್ಚು ಹಣವೂ ಬರುತ್ತದೆ. ಆದರೆ, ಅವರೊಂದಿಗೆ ಕೊರೊನಾ ಸಹ ಬರುತ್ತದೆ. ಹೀಗಾಗಿ, ದಿನಸಿ ವರ್ತಕರ ಸಂಘವು ಕೊರೊನಾ ಹಾವಳಿ ತಡೆಯಲು ಈ ತೀರ್ಮಾನ ಕೈಗೊಂಡಿದೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ಈಟಿವಿ ಭಾರತಕ್ಕೆ ತಿಳಿಸಿದರು.
ಅಂಗಡಿಗಳು ಬಂದ್ ಆದ ನಂತರ ರಸ್ತೆಗಳು ಖಾಲಿ ಖಾಲಿ ಹೊಡೆಯುತ್ತವೆ. ಜನರ ಓಡಾಟ ಇರುವುದಿಲ್ಲ. ವಾಹನ ಸಂಚಾರವೂ ಅಷ್ಟಕಷ್ಟೇ. ಸಗಟು ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರದ ಜೊತೆಗೆ ಜನರ ಸಹಕಾರವೂ ಮುಖ್ಯ ಎಂಬ ಸಂದೇಶವನ್ನು ಈ ಮೂಲಕ ಅವರು ರವಾನಿಸಿದ್ದಾರೆ.