ಶಿವಮೊಗ್ಗ: ಹೂ ಇಸ್ ಯತ್ನಾಳ್, ರಾಜ್ಯದಲ್ಲಿ ಸಿಎಂ ಬದಲಾವಣೆಯ ಮಾತಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಶಾಸಕ ಯತ್ನಾಳ್ ವಿರುದ್ಧ ಗರಂ ಆಗಿದ್ದಾರೆ.
ಹೂ ಇಸ್ ಯತ್ನಾಳ್.. ಸಿಎಂ ಬದಲಾವಣೆ ಇಲ್ಲ: ಅರುಣ್ ಸಿಂಗ್ ಗರಂ - MLA BasanaGowda Patil Yatnal
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಯನ್ನು ಕೇಂದ್ರದ ನಾಯಕರು ಗಮನಿಸಿದ್ದಾರೆ. ಈ ಕುರಿತು ಕೇಂದ್ರದ ನಾಯಕರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ನಗರದಲ್ಲಿ ಇಂದು ರಾಜ್ಯ ಬಿಜೆಪಿಯ ವಿಶೇಷ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡುವಾಗ, ಶಾಸಕ ಯತ್ನಾಳ್ ಸಿಎಂ ಯಡಿಯೂರಪ್ಪನವರ ವಿರುದ್ದ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಗರಂ ಆಗಿ ಯಾರದು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು, ಸಭೆ ಬಹಳ ಅಚ್ಚುಕಟ್ಟಾಗಿ ಆರೋಗ್ಯಕರ ಚರ್ಚೆ ನಡೆದಿದೆ.
ಯಡಿಯೂರಪ್ಪ ನಮ್ಮ ನಾಯಕ. ಅವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಅವರ ಉತ್ತಮ ಆಡಳಿತದಿಂದಲೇ ನಾವು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ಕಾಂಗ್ರೆಸ್ ಒಡೆದ ಮನೆಯಾಗಿದ್ದು, ನಾಯಕರೇ ಇಲ್ಲದಂತಾಗಿದೆ. ಜೆಡಿಎಸ್ ಜೊತೆ ನಮ್ಮ ಯಾವುದೇ ಸಂಪರ್ಕವಿಲ್ಲ. ಅವರ ಜೊತೆ ಸಖ್ಯವೇ ನಮಗೆ ಬೇಡವಾಗಿದೆ. ನಮ್ಮದು ರಾಷ್ಟ್ರೀಯ ಪಕ್ಷ. ನಾವು ಯಾವುದೇ ಚುನಾವಣೆಯನ್ನು ನಮ್ಮ ಪಕ್ಷದ ಸ್ವಸಾರ್ಮಥ್ಯದ ಮೇಲೆ ಎದುರಿಸುತ್ತೇವೆ ಎಂದರು.