ಕರ್ನಾಟಕ

karnataka

ETV Bharat / state

ವಿಶ್ವ ಉರಗ ದಿನದ ವಿಶೇಷ: ಶಿವಮೊಗ್ಗದಲ್ಲಿ ಅಪರೂಪದ ಬಿಳಿ‌ ನಾಗರಹಾವು ಪತ್ತೆ! - Rare cobra found in Shivamogga

ಗರುಡ ಹಾಗೂ‌ ಇತರೆ ಪ್ರಾಣಿಗಳಿಂದ ಹಾವುಗಳು ತಮ್ಮನ್ನು ತಾನು ರಕ್ಷಿಸಿಕೊಳ್ಳುವುದು ಸಾಮಾನ್ಯ. ಆದರೆ, ಈ ಹಾವಿನ ಬಣ್ಣ ಬಿಳಿಯಾಗಿದ್ದರಿಂದ ಇದು ಎಲ್ಲಿ ಹೋದರೂ ಶತ್ರುಗಳ ಕಣ್ಣಿಗೆ ಬೀಳುತ್ತದೆ. ಹಾಗಾಗಿ ಈ ಹಾವು‌ ಬದುಕಿ‌ ಉಳಿಯುವ ಸಾಧ್ಯತೆ ಕಡಿಮೆ.

White cobra found in Shivamogga
ಶಿವಮೊಗ್ಗದಲ್ಲಿ ಅಪರೂಪದ ಬಿಳಿ‌ ನಾಗರಹಾವು ಪತ್ತೆ

By

Published : Jul 16, 2022, 4:35 PM IST

ಶಿವಮೊಗ್ಗ: ಇಂದು ವಿಶ್ವ ಉರಗ ದಿನ. ಉರಗಗಳಿಗೆ ಭಾರತೀಯ ಪರಂಪರೆಯಲ್ಲಿ ವಿಶೇಷವಾದ ಸ್ಥಾನವಿದೆ. ಉರಗಳನ್ನು ನಮ್ಮಲ್ಲಿ ಪೂಜ್ಯನೀಯ ಸ್ಥಾನದಲ್ಲಿಡಲಾಗಿದೆ. ಹಾಗಾಗಿ ತಿಳಿದವರು ಹಾವುಗಳಿಗೆ ಯಾವತ್ತೂ ತೂಂದರೆ ನೀಡುವುದಿಲ್ಲ.‌ ಹಾವುಗಳಲ್ಲಿ‌ ಹಲವು ವಿಧಗಳಿವೆ. ಇಂದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅಪರೂಪದಲ್ಲಿ ಅಪರೂಪವಾದ ಬಿಳಿ ನಾಗರ (ಅಲ್ಬಿನೂ ಕೋಬ್ರಾ) ಹಾವೊಂದು ಪತ್ತೆಯಾಗಿದೆ. ಈ ರೀತಿಯ ಹಾವು ಕಂಡು ಬರುವುದು ಅಪರೂಪವಂತೆ.

ಇದು ನೋಡಲು ಇತರೆ ಹಾವುಗಳಿಕ್ಕಿಂತ ಬಣ್ಣದ ಮೂಲಕ ಭಿನ್ನವಾಗಿದೆ. ನಾಗರ ಹಾವುಗಳಲ್ಲಿ ಗೋದಿ ಬಣ್ಣದ ಹಾಗೂ ಕಪ್ಪು‌ ಮಿಶ್ರಿತ ಬಣ್ಣದ ಹಾವುಗಳೇ ಹೆಚ್ಚು. ಆದರೆ, ಈ ಹಾವು ಅಚ್ಚ ಬಿಳಿ ಬಣ್ಣದಾಗಿದ್ದು, ಇದನ್ನು ಅಲ್ಬಿನೂ ಕೋಬ್ರಾ ಎಂದು ಸಹ ಕರೆಯುತ್ತಾರೆ. ಹಾಗಾಗಿ ಈ ಹಾವು ತನ್ನ ಬಣ್ಣದ ಮೂಲಕ ಭಿನ್ನವಾಗಿ ಕಾಣುತ್ತದೆ.

ಶಿವಮೊಗ್ಗದಲ್ಲಿ ಅಪರೂಪದ ಬಿಳಿ‌ ನಾಗರಹಾವು ಪತ್ತೆ

ಇದನ್ನೂ ಓದಿ:ಹಾವೇರಿ: ನದಿ ಮಧ್ಯೆ ಸಿಲುಕಿದ್ದ ಕುದುರೆ... ದಡ ಸೇರಿಸಿದ ಅಗ್ನಿ ಶಾಮಕ ಸಿಬ್ಬಂದಿ

ತೀರ್ಥಹಳ್ಳಿ ರಸ್ತೆಯ ಡಾ.ಪ್ರೀತಮ್ ಎಂಬುವರ ತೋಟದಲ್ಲಿ ಈ ಹಾವು ಪತ್ತೆಯಾಗಿದ್ದು, ಉರಗ ರಕ್ಷಕ ಸ್ನೇಕ್ ಕಿರಣ್ ಎಂಬುವರು ಇದನ್ನು ರಕ್ಷಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ತೋಟದಲ್ಲಿ‌ ಓಡಾಡುತ್ತಿತ್ತು. ಸುದ್ದಿ ತಿಳಿದ ಕಿರಣ್ ಇದೀಗ ಆ ಹಾವನ್ನು ರಕ್ಷಣೆ ಮಾಡಿದ್ದು, ಅರಣ್ಯ ಇಲಾಖೆಯವರ ಅನುಮತಿ‌ ಮೇರೆಗೆ ಕಾಡಿಗೆ ಬಿಟ್ಟು ಬರಲಿದ್ದಾರಂತೆ.

ಈ ಹಾವು ಇತರೆ ಹಾವುಗಳಿಂದ ಭಿನ್ನ. ಇಂತಹ‌ ಹಾವುಗಳ ರಕ್ಷಣೆ ಮಾಡುವುದು ಅವಶ್ಯಕವಾಗಿದೆ. ಇದು ಪ್ರತಿ ಬಾರಿ‌ ಪೊರೆ ಬಿಟ್ಟಾಗ ಇನ್ನಷ್ಟು ಬಿಳಿಯಾಗುತ್ತದೆ. ಈ ಹಾವು ರಕ್ತ ಹಾಗೂ ಚರ್ಮದ ಸಮಸ್ಯೆಯಿಂದ‌ ಈ ರೀತಿ ಬಿಳಿಯಾಗಿ ಇರುತ್ತದೆ ಎಂದು ಉರಗ ರಕ್ಷಕ ಸ್ನೇಕ್ ಕಿರಣ್ ಅಪರೂಪ ಹಾವಿನ ಬಗ್ಗೆ ಮಾಹಿತಿ ನೀಡಿದರು.

ಶಿವಮೊಗ್ಗದಲ್ಲಿ ಅಪರೂಪದ ಬಿಳಿ‌ ನಾಗರಹಾವು ಪತ್ತೆ

ಬಣ್ಣವೇ ಹಾವಿಗೆ ಶತ್ರು:ಗರುಡ ಹಾಗೂ‌ ಇತರೆ ಪ್ರಾಣಿಗಳಿಂದ ಹಾವುಗಳು ರಕ್ಷಿಸಿಕೊಳ್ಳುವುದು ಸಾಮಾನ್ಯ. ಆದರೆ, ಈ ಹಾವಿನ ಬಣ್ಣ ಬಿಳಿಯಾಗಿದ್ದರಿಂದ ಇದು ಎಲ್ಲಿ ಹೋದರೂ ಶತ್ರುಗಳ ಕಣ್ಣಿಗೆ ಬೀಳುತ್ತದೆ. ಹಾಗಾಗಿ ಈ ಹಾವು‌ ಬದುಕಿ‌ ಉಳಿಯುವ ಸಾಧ್ಯತೆ ಕಡಿಮೆ. ಈ ಹಾವು ತಲೆಯಿಂದ ಬಾಲದ ತನಕ ಒಂದೇ ಬಣ್ಣವನ್ನು ಹೊಂದಿರುವು ಮತ್ತೊಂದು ಅಪರೂಪವಂತೆ.

ಶಿವಮೊಗ್ಗದಲ್ಲಿ ಅಪರೂಪದ ಬಿಳಿ‌ ನಾಗರಹಾವು ಪತ್ತೆ

ABOUT THE AUTHOR

...view details