ಕರ್ನಾಟಕ

karnataka

By

Published : Jun 29, 2019, 10:47 AM IST

ETV Bharat / state

ಶಿವಮೊಗ್ಗ: ವಿಕಲಾಂಗ ಅನಾಥನ ಕತೆ ಹೇಳುವ ಮೂಗ ಚಿತ್ರ ಉಚಿತ ಪ್ರದರ್ಶನ ಇಂದು

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಳ್ಳುವ ಟಾಕೀಸ್ ಸಿನಿವಾರದಲ್ಲಿ ಇಂದು ‘ಮೂಗ ’ ಕೊಡವ ಭಾಷೆ ಚಿತ್ರ ಪ್ರದರ್ಶನವಾಗಲಿದೆ.

ಮೂಗ ಚಿತ್ರದ ನಿರ್ದೇಶಕ ಹಾಗೂ ನಟ ಹರೀಶ್ ರಾಜ್

ಶಿವಮೊಗ್ಗ:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಳ್ಳುವ ಟಾಕೀಸ್ ಸಿನಿವಾರದಲ್ಲಿ ಇಂದು ‘ಮೂಗ ’ ಕೊಡವ ಭಾಷೆ ಚಿತ್ರ ಪ್ರದರ್ಶನವಾಗಲಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರದಲ್ಲಿ ಹರೀಶ್ ರಾಜ್ ನಿರ್ದೇಶನದ ಮೂಗ ಕೊಡವ ಭಾಷಾ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾ ಭವನದ ಎರಡನೇ ಮಹಡಿಯ ಮಿನಿ ಚಿತ್ರಮಂದಿರದಲ್ಲಿ 29 ರ ಶನಿವಾರದಂದು ಸಂಜೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಮೂಗ ಚಿತ್ರದ ನಿರ್ದೇಶಕ ಹಾಗೂ ನಟ ಹರೀಶ್ ರಾಜ್

ಕಿವುಡು ಮತ್ತು ಮೂಕ ಸಮಸ್ಯೆಯಿರುವ ಅನಾಥ ಯುವಕನೊಬ್ಬನ ಕತೆಯನ್ನು ಮೂಗ ಚಿತ್ರ ಹೇಳುತ್ತದೆ. ಕುಟುಂಬವೊಂದರಲ್ಲಿ ಸ್ವಾರ್ಥ ರಹಿತ ಸೇವೆ ಸಲ್ಲಿಸುತ್ತಿರುವ ಮೂಗನ ಮುಗ್ಧತೆಯನ್ನು ಆ ಕುಟುಂಬದವರು ಶೋಷಿಸುತ್ತಾರೆ. ಅಲ್ಲದೆ ಆತನನ್ನು ನಿಕೃಷ್ಟವಾಗಿ ನೋಡುತ್ತಾ ಅವನನ್ನು ದೂಷಿಸಿ, ತಪ್ಪೇ ಇಲ್ಲದಿದ್ದರೂ ದಂಡಿಸುತ್ತಾರೆ. ಅಲ್ಲದೇ, ಕೊನೆಗೆ ಆ ಕುಟುಂಬದ ಮರ್ಯಾದೆಯನ್ನು ಕಾಪಾಡುವ ದೃಷ್ಟಿಯಿಂದ ಅದೇ ಕುಟುಂಬದ ಯುವತಿಯನ್ನು ಆತ ಬಲವಂತವಾಗಿ ಮದುವೆ ಮಾಡಿಕೊಳ್ಳಬೇಕಾಗುತ್ತದೆ. ಕೊನೆಗೆ ಆ ಕುಟುಂಬಕ್ಕೆ ಅವನು ಯಾರು ಎನ್ನುವ ರಹಸ್ಯ ಗೊತ್ತಾಗುತ್ತದೆ.


2018ರ ಸಾಲಿನ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ವೀಕ್ಷಕರಿಂದ ಉತ್ತಮ ವಿಮರ್ಶೆಯನ್ನು ಮೂಗ ಚಿತ್ರಗಳಿಸಿದೆ. ಚಿತ್ರದಲ್ಲಿ ಹರೀಶ್ ರಾಜ್, ಸಾನ್ವಿ ಪೊನ್ನಮ್ಮ, ತೀರ್ಥ ತಂಗಮ್ಮ ಮುಂತಾದವರಿದ್ದು, ಚಿತ್ರಕ್ಕೆ ಸುಬ್ರಮಣ್ಯರವರ ಛಾಯಗ್ರಹಣ, ರೀನಿಯವರ ಸಂಗೀತವಿದೆ.

ಚಿತ್ರ ಪ್ರದರ್ಶನ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ವೀಕ್ಷಿಸಲು ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಚಿತ್ರದ ಒಟ್ಟು ಅವಧಿ 95 ನಿಮಿಷಗಳು. ಚಿತ್ರಕ್ಕೆ ಇಂಗ್ಲಿಷ್ ಸಬ್ ಟೈಟಲ್ ಇದೆ.

For All Latest Updates

TAGGED:

ABOUT THE AUTHOR

...view details