ಕರ್ನಾಟಕ

karnataka

ETV Bharat / state

18,983 ಸ್ಲಂ‌ ನಿವಾಸಿಗಳಿಗೆ ಸ್ವಂತ ಸೂರು ಕಲ್ಪಿಸಲಾಗುತ್ತಿದೆ: ಸಚಿವ​ ಈಶ್ವರಪ್ಪ - 18983 Slum dwellers own property

ಮಹಾನಗರ ಪಾಲಿಕೆ ಮತ್ತು ಇತರ ಸರ್ಕಾರಿ ಇಲಾಖೆಗಳ ಜಮೀನುಗಳಲ್ಲಿರುವ ಕೊಳಚೆ ಪ್ರದೇಶಗಳ ಜಮೀನನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಒಂದು ತಿಂಗಳ ಒಳಗಾಗಿ ಹಸ್ತಾಂತರಿಸಿ ಶೀಘ್ರ ಹಕ್ಕುಪತ್ರ ನೀಡಲು ಸೂಚನೆ ನೀಡಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

eshwarappa
ಕೆ ಎಸ್​ ಈಶ್ವರಪ್ಪ

By

Published : Apr 29, 2021, 4:39 PM IST

ಶಿವಮೊಗ್ಗ: ಜಿಲ್ಲೆಯ 18,983 ಸ್ಲಂ ನಿವಾಸಿಗಳಿಗೆ ರಾಜ್ಯ ಸರ್ಕಾರ ಸ್ವಂತ ಸೂರಿನ ಮಾಲೀಕತ್ವ ಹೊಂದಲು ಅವಕಾಶ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮಾಲೀಕತ್ವದ ಜಮೀನಿನಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳ ಕುಟುಂಬಗಳಿಗೆ ಸ್ವಂತ ಸೂರಿನ ಮಾಲೀಕತ್ವ ಹೊಂದಲು ಅನುಕೂಲವಾಗುತ್ತದೆ ಎಂದರು.

ಸಚಿವ ಕೆ.ಎಸ್.ಈಶ್ವರಪ್ಪ

ಇದು ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದೆ. ಹಕ್ಕುಪತ್ರಗಳನ್ನು ವಿತರಿಸಲು ದರ ನಿಗದಿ ಮಾಡಲಾಗಿದೆ. ಹಿಂದೆ ಪುರಸಭೆ ಮತ್ತು ಪಟ್ಟಣ ಪಂಚಾಯತ್​ನ 1200 ಚದರ ಅಡಿಗೆ 3,000 ರೂ. ನಿಗದಿ ಮಾಡಲಾಗಿತ್ತು. ಹಾಲಿ 2 ಸಾವಿರ ರೂ. ನಿಗದಿ ಮಾಡಿದೆ. ಎಸ್ಸಿ-ಎಸ್ಟಿ, ಅಂಗವಿಕಲರಿಗೆ ಹಿಂದೆ 1,500 ರೂ., ಈಗ 1 ಸಾವಿರ ರೂ. ನಿಗದಿ ಮಾಡಿದೆ. ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿಗೆ 4 ಸಾವಿರ ರೂ. ಇತ್ತು. ಈಗ 2 ಸಾವಿರ ರೂ‌. ನಿಗದಿ ಮಾಡಿದೆ. ಎಸ್ಸಿ/ಎಸ್ಟಿ, ಅಂಗವಿಕಲರಿಗೆ ಹಿಂದೆ 2 ಸಾವಿರ ರೂ. ಇತ್ತು. ಈಗ 1 ಸಾವಿರ ರೂ. ನಿಗದಿ ಮಾಡಿದೆ. ಬಿಬಿಎಂಪಿ/ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳಿಗೆ ಹಿಂದೆ 10 ಸಾವಿರ ರೂ. ಇತ್ತು. ಈಗ 4 ಸಾವಿರ ರೂ. ನಿಗದಿ ಮಾಡಿದೆ. ಎಸ್ಸಿ/ ಎಸ್ಟಿ, ಅಂಗಲವಿಕಲರಿಗೆ 5 ಸಾವಿರ ರೂ. ಇತ್ತು. ಈಗ 2 ಸಾವಿರ ರೂ. ನಿಗದಿ ಮಾಡಿದೆ ಎಂದು ತಿಳಿಸಿದರು.

ನಗರದಲ್ಲಿ 34 ಸ್ಲಂಗಳಿದ್ದು, 5531 ಕುಟುಂಬಗಳ 26,732 ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗುವುದು. ಭದ್ರಾವತಿ 6,388 ನಿವಾಸಿಗಳು, ಸಾಗರ- 3,326 ನಿವಾಸಿಗಳು, ಜೋಗ-ಕಾರ್ಗಲ್​​ನಲ್ಲಿ 198, ಸೊರಬ-604, ಶಿಕಾರಿಪುರ-1166, ಶಿರಾಳಕೊಪ್ಪ-1011, ಹೊಸನಗರ-268, ತೀರ್ಥಹಳ್ಳಿ-360 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 18,983 ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗುವುದು ಎಂದರು.

ಮಹಾನಗರ ಪಾಲಿಕೆ ಮತ್ತು ಇತರ ಸರ್ಕಾರಿ ಇಲಾಖೆಗಳ ಜಮೀನುಗಳಲ್ಲಿರುವ ಈ ಕೊಳಚೆ ಪ್ರದೇಶಗಳ ಜಮೀನನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಒಂದು ತಿಂಗಳ ಒಳಗಾಗಿ ಹಸ್ತಾಂತರಿಸಿ ಶೀಘ್ರ ಹಕ್ಕುಪತ್ರ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಖಾಸಗಿ ಜಮೀನುಗಳಲ್ಲಿ ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವವರಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಓದಿ:ಉಮೇಶ್ ಕತ್ತಿ ಇರೆಸ್ಪಾನ್ಸಿಬಲ್ ಮಿನಿಸ್ಟರ್... ನೀ ಸಾಯಿ ಹೋಗು ಅನ್ನೋದು ಉದ್ದಟತನ: ಸಿದ್ದರಾಮಯ್ಯ

ABOUT THE AUTHOR

...view details