ಕರ್ನಾಟಕ

karnataka

ತಮ್ಮ ಕಲಾವಧಿಯಲ್ಲಿ ರಂಗಾಯಣದಲ್ಲಿ ರಚನಾತ್ಮಕ ಕೆಲಸಗಳಾಗಿವೆ: ಮಾಜಿ ಅಧ್ಯಕ್ಷ ಡಾ. ಗಣೇಶ್

By

Published : Sep 16, 2019, 8:54 PM IST

ನಾನು ರಂಗಾಯಣ ನಾಟಕ ಸಂಸ್ಥೆಯ ಅಧ್ಯಕ್ಷನಾಗಿದ್ದಾಗ ರಚನಾತ್ಮಕ ಕೆಲಸಗಳನ್ನು ಮಾಡಿ ರಂಗಯಣದ ಹೆಸರನ್ನು ಪರಿಚಯ ಮಾಡಿದ್ದೇನೆ. ಉತ್ತಮ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದು ರಂಗಾಯಣ ನಾಟಕ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಗಣೇಶ್ ಹೇಳಿದರು.

ಡಾ. ಗಣೇಶ್ , Ganesh

ಶಿವಮೊಗ್ಗ:ತಮ್ಮ ಅಧಿಕಾರವಧಿಯಲ್ಲಿ ರಂಗಾಯಣ ಸಂಸ್ಥೆಯಲ್ಲಿ ರಚನಾತ್ಮಕ ಕೆಲಸಗಳನ್ನು ಮಾಡುವ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಿರುವ ತೃಪ್ತಿ ಇದೆ ಎಂದು ರಂಗಾಯಣ ನಾಟಕ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಗಣೇಶ್ ಹೇಳಿದರು.

ರಂಗಾಯಣದ ಮಾಜಿ ಅಧ್ಯಕ್ಷ ಡಾ. ಗಣೇಶ್

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಂಗಾಯಣ ನಿರ್ದೇಶಕರ ಹುದ್ದೆಯಿಂದ ಪದ ಮುಕ್ತಗೊಳಿಸಿದೆ. 2017ರಲ್ಲಿ ನಾನು ನಿರ್ದೇಶಕನಾಗಿ ನೇಮಕವಾಗಿದ್ದೆ. ಅಲ್ಲಿಂದ ಕ್ರಿಯಾಶೀಲ ರಂಗಚಟುವಟಿಕೆಗಳಲ್ಲಿ ತೊಡಗಿದ್ದು, ನನ್ನ ಜೊತೆಗೆ ಹಲವು ಗೆಳೆಯರು ,ರಂಗಾಸಕ್ತರು ಪ್ರಮುಖವಾಗಿ ಶಿವಮೊಗ್ಗದ ಸಾರ್ವಜನಿಕರು ತಮ್ಮೊಂದಿಗೆ ಸಹಕರಿಸಿದ್ದಾರೆ. ಇವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದರು.

ರಂಗಾಯಣದಲ್ಲಿ ವಾರಾಂತ್ಯ ನಾಟಕಗಳನ್ನು ಏರ್ಪಡಿಸಿ ಮಾದರಿಯಾಗಿದ್ದೇವೆ. ಇದರ ಜೊತೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಾಟಕ ಪ್ರದರ್ಶನ ಮಾಡಿ ಗ್ರಾಮೀಣ ಭಾಗದಲ್ಲಿಯೂ ರಂಗಾಯಣದ ರಂಗ ತೇರನ್ನು ಎಳೆದಿರುವ ಹೆಮ್ಮೆ ನಮಗಿದೆ. ಕೇವಲ ಇಷ್ಟೇ ಅಲ್ಲದೇ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ತರಬೇತಿ ಮಾಡಿ ಚಿಣ್ಣರ ರಂಗೋತ್ಸವ ಕೈಗೊಂಡಿದ್ದೆವಿ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ನಾಟಕೋತ್ಸವ ಏರ್ಪಡಿಸಿ ಶಿವಮೊಗ್ಗದಲ್ಲಿ ರಂಗಭೂಮಿ ಹಬ್ಬವನ್ನೇ ಉಂಟು ಮಾಡಿರುವುದು ನಮ್ಮ ಹೆಮ್ಮೆಯ ವಿಷಯ ಎಂದರು.

ರಂಗಭೂಮಿಯ ಕಲಾವಿದರು ಯಾವುದೇ ಪಕ್ಷ ಪಾತವಿಲ್ಲದೇ ತಮ್ಮ ಕಾಯಕ ಮಾಡುತ್ತಿರುತ್ತಾರೆ. ಹಾಗಾಗಿ ಅವರ ಅಧಿಕಾರವಧಿ ಮುಗಿಯುವ ತನಕ ಅವರನ್ನ ಪದ ಮುಕ್ತಿಗೊಳಿಸಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details