ಶಿವಮೊಗ್ಗ: ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ಶಿವಮೊಗ್ಗದ ನಗರ ವ್ಯಾಪ್ತಿಯ ನೀರು ಪೂರೈಕೆ ಜವಾಬ್ದಾರಿ ನೀಡಲಾಯಿತು.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 750 ಕಿ.ಮೀ. ದೂರದ ವ್ಯಾಪ್ತಿಯಷ್ಟು ನೀರಿನ ಪೂರೈಕೆ ಮಾಡಲಾಗುತ್ತಿದೆ. ಶಿವಮೊಗ್ಗ ನಗರದಲ್ಲೇ 47 ಸಾವಿರ ನೀರಿನ ಸಂಪರ್ಕಗಳಿವೆ. ಶಿವಮೊಗ್ಗ ನಗರಕ್ಕೆ ಗಾಜನೂರಿನ ತುಂಗಾ ಅಣೆಕಟ್ಟೆಯಿಂದ ನೀರು ಸರಬರಾಜು ಆಗುತ್ತದೆ. ಗಾಜನೂರಿನಿಂದ ಶಿವಮೊಗ್ಗದ ಮಂಡ್ಲಿಯ ಕೃಷ್ಣರಾಜೇಂದ್ರ ಸಾಗರ ನೀರು ಶುದ್ಧೀಕರಣ ಘಟಕಕ್ಕೆ ನೀರು ತಂದು ಶುದ್ಧೀಕರಣ ಮಾಡಿ ಪೈಪ್ಗಳ ಮೂಲಕ ನೀರನ್ನು ಜನರಿಗೆ ತಲುಪಿಸಲಾಗುತ್ತದೆ. ಪ್ರತೀ ದಿನ ಗಾಜನೂರಿನಿಂದ 84 ಎಂಎಲ್‌ಡಿಯಷ್ಟು ನೀರನ್ನು ತರಲಾಗುತ್ತಿದೆ. ಶುದ್ಧೀಕರಣ, ಪ್ರಸರಣ ಈ ಪ್ರಕ್ರಿಯೆಯಲ್ಲಿ ಶೇ. 30ರಷ್ಟು ನೀರು ನಷ್ಟ ಉಂಟಾಗುತ್ತದೆ. ಇದರಿಂದ ನಗರಕ್ಕೆ ಪ್ರತೀ ದಿನ 65 ಎಂಎಲ್‌ಡಿಯಷ್ಟು ನೀರು ಜನರಿಗೆ ತಲುಪುತ್ತದೆ. ಇದರಲ್ಲಿ 10 ಎಂಎಲ್‌ಡಿ ನೀರು ದೊಡ್ಡ ಸಂಸ್ಥೆಗಳಿಗೆ ಬೇಕಾಗುತ್ತದೆ.