ಕರ್ನಾಟಕ

karnataka

ETV Bharat / state

ವಿವಾದಾತ್ಮಕ ಗೋಡೆ ಬರಹ: ಮಾಜಿ ಸಚಿವ ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು? - ಈಟಿವಿ ಭಾರತ ಕನ್ನಡ

ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ಹುಲಿಗಳ ಕೈಯಲ್ಲಿ ಆಡಳಿತವಿದೆ. ಹೀಗಾಗಿ ಇಲಿಗಳ ರೂಪದಲ್ಲಿರುವ ಪಿಎಫ್​ಐ ಅನ್ನು ಮಟ್ಟ ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

wall-writing-in-shiralakoppa-to-join-pfi
ವಿವಾದಾತ್ಮಕ ಗೋಡೆ ಬರಹ ಬಗ್ಗೆ ಮಾಜಿ ಸಚಿವ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು...?

By

Published : Dec 4, 2022, 8:39 PM IST

ಶಿವಮೊಗ್ಗ: ಗೋಡೆಗಳ ಮೇಲೆ ಬರಹ ಬರೆಯುವಂತವರು ಹೇಡಿಗಳು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಗೋಡೆ ಬರಹ ಬರೆದವರ ವಿರುದ್ಧ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಪಿಎಫ್​ಐನವರು ಎದುರಿಗೆ ಬಂದು ಯಾವತ್ತೂ ಏನು ಮಾಡಲ್ಲ. ರಾತ್ರಿ ಹೊತ್ತು ಒಬ್ಬೊಬ್ಬರೇ ಇದ್ದಾಗ ಬಂದು ಕೊಲೆ ಮಾಡುತ್ತಾರೆ. ಯಾರು ಇಲ್ಲದ ಜಾಗ ನೋಡಿ ಬಾಂಬ್ ಹಾಕೋದೇ ಅವರ ಕೆಲಸವಾಗಿದೆ. ರಾತ್ರಿ ಹೊತ್ತು ಬರಹ ಬರೆದು ಕಣ್ಣುತಪ್ಪಿಸಿ ಹೋಗುವ ಹೇಡಿತನದ ಕೆಲಸವನ್ನು ಪಿಎಫ್​ಐ ಮಾಡುತ್ತಿದೆ ಎಂದು ಆರೋಪಿಸಿದರು.

ಅವರಿಗೆ ದೇಶದ ಬಗ್ಗೆ ಕಲ್ಪನೆ ಇಲ್ಲ. ದೇಶ ಅಭಿವೃದ್ಧಿ ಆಗಬೇಕೆಂಬುದು ಇಲ್ಲ. ಒಟ್ಟಾರೆಯಾಗಿ ದೇಶದ್ರೋಹಿ ಕೆಲಸ ಮಾಡಬೇಕು, ಗಲಭೆ ಎಬ್ಬಿಸಬೇಕು ಎಂಬುದೇ ಅವರ ಮುಖ್ಯ ಉದ್ದೇಶ. ಇದು ಬಹಳ ದಿನ ನಡೆಯುವುದಿಲ್ಲ. ಈಗಾಗಲೇ ಪಿಎಫ್​ಐ ಎಂಬ ದೇಶದ್ರೋಹಿ ಸಂಘಟನೆಯನ್ನು ಬ್ಯಾನ್ ಮಾಡಿದ್ದೇವೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಂಗ್ರೆಸಿಗರು ಪಿಎಫ್​ಐ ರಾಷ್ಟ್ರದ್ರೋಹಿ ಚಟುವಟಿಕೆಗೆ ಬೆಂಬಲಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ಹುಲಿಗಳ ಕೈಯಲ್ಲಿ ಆಡಳಿತವಿದೆ. ಹೀಗಾಗಿ ಇಲಿಗಳ ರೂಪದಲ್ಲಿರುವ ಪಿಎಫ್​ಐ ಅನ್ನು ಮಟ್ಟ ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.

ವಿವಾದಾತ್ಮಕ ಗೋಡೆ ಬರಹ ಬಗ್ಗೆ ಮಾಜಿ ಸಚಿವ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು...?

ಇನ್ನು ಈ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಅವರು ಮಾತನಾಡಿ, ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವ ಸಂಘಟನೆಗಳನ್ನು ತುದಿ‌ ಮುಟ್ಟಿಸುವ ಸಂಕಲ್ಪ ಮಾಡಿದ್ದೇವೆ ಎಂದರು. ಪಿಎಫ್​ಐ, ಸಿಎಫ್​ಐ ಬ್ಯಾನ್ ಬಳಿಕ ಅದನ್ನು ಪ್ರಶ್ನಿಸಿ‌ ಕೆಲವರು ಕೋರ್ಟ್​ಗೆ ಹೋಗಿದ್ದರು. ಕೋರ್ಟ್ ಕೂಡಾ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದೆ. ಅಲ್ಲದೇ ದೇಶ ವಿರೋಧಿ ಕೆಲಸ ಈಗಲೂ ಅಲ್ಲೊಂದು‌ ಇಲ್ಲೊಂದು ನಡೆಯುತ್ತಿವೆ. ಇದಕ್ಕೆ ಉದಾಹರಣೆಯಾಗಿ ಶಿರಾಳಕೊಪ್ಪದ ಗೋಡೆ ಬರಹ ಸಾಕ್ಷಿಯಾಗಿದೆ. ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಮುಸ್ಲಿಂ ಸಮುದಾಯದ ಹಿರಿಯರೇ ದೇಶ ವಿರೋಧಿ ಚಿಂತನೆಯನ್ನು ಸರಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಕಾನೂನು ಚೌಕಟ್ಟಿ‌ನಲ್ಲಿ‌ ಸರ್ಕಾರ ಉಗ್ರವಾದ ಕ್ರಮ ಕೈಗೊಳ್ಳುತ್ತದೆ ಎಂದರು.

ಇದನ್ನೂ ಓದಿ:ನಿಷೇಧಿತ PFI-CFI ಸೇರುವಂತೆ ಶಿರಾಳಕೊಪ್ಪದಲ್ಲಿ ವಿವಾದಾತ್ಮಕ ಗೋಡೆ ಬರಹ

ABOUT THE AUTHOR

...view details