ಕರ್ನಾಟಕ

karnataka

ETV Bharat / state

ಮೈಕ್ರೋ ಫೈನಾನ್ಸ್‌ ಮೂಲಕ ಪಡೆದ ಸಾಲ ಮನ್ನಾ ಮಾಡಿ: ತಿ.ನಾ.ಶ್ರೀನಿವಾಸ್ ಆಗ್ರಹ - ಮೈಕ್ರೋ ಫೈನಾನ್ಸ್​ ಹೆಸರಿನಲ್ಲಿ ಕಿರುಕುಳ

ಮೈಕ್ರೋ ಫೈನಾನ್ಸ್​ ಹೆಸರಿನಲ್ಲಿ ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಸುಳ್ಳು ಹೇಳಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಋಣಮುಕ್ತ ಕಾಯ್ದೆಯಡಿ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದವರ ಸಾಲ ಮನ್ನಾ ಮಾಡಬೇಕು ಎಂದು ಕಾಂಗ್ರೆಸ್​ ಮುಖಂಡ ತೀ.ನಾ.ಶ್ರೀನಿವಾಸ್​ ಆಗ್ರಹಿಸಿದ್ದಾರೆ.

Shreenivasa
ತಿ.ನಾ ಶ್ರೀನಿವಾಸ್ ಆಗ್ರಹ

By

Published : Dec 11, 2019, 8:51 PM IST

ಶಿವಮೊಗ್ಗ:ಋಣಮುಕ್ತ ಕಾಯ್ದೆಯಡಿ ಮೈಕ್ರೋ ಪೈನಾನ್ಸ್​​ಗಳ ಸಾಲ ಮನ್ನಾ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ತಿ.ನಾ. ಶ್ರೀನಿವಾಸ್ ಆಗ್ರಹಿಸಿದರು.

ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮೈಕ್ರೋಫೈನಾನ್ಸ್‌ ಸಂಸ್ಥೆಗಳ ಹಾವಳಿ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಸುಮಾರು 172ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್​ಗಳಿವೆ. ಇವುಗಳನ್ನು ಸ್ಥಾಪಿಸಿರುವವರು ಒಂದು ರೀತಿಯಲ್ಲಿ ಬಡ್ಡಿ ವ್ಯವಹಾರ ಮಾಡುವ ಶ್ರೀಮಂತರಾಗಿದ್ದಾರೆ ಎಂದರು.

ತಿ.ನಾ. ಶ್ರೀನಿವಾಸ್ ಆಗ್ರಹ

ನಾವು ಉದ್ಯೋಗ ಸೃಷ್ಟಿ ಮಾಡುತ್ತೇವೆ, ಮಹಿಳೆಯರಿಗೆ ತರಬೇತಿಗಳನ್ನು ನೀಡುತ್ತೇವೆ, ಅವರು ಸ್ವಯಂ ಉದ್ಯೋಗ ಪಡೆದ ನಂತರ ಹಣ ವಸೂಲಾತಿ ಮಾಡುತ್ತೇವೆ, ಬಡತನ ನಿರ್ಮೂಲನೆ ಮಾಡುತ್ತೇವೆ ಎಂದೆಲ್ಲಾ ಸುಳ್ಳು ಹೇಳಿ ಮಹಿಳೆಯರಿಗೆ ಸಾಲ ನೀಡಿ ಈಗ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಬೇನಾಮಿ ಹೆಸರಿನಲ್ಲಿ ಹಣ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಗಳನ್ನು ರಾಷ್ಟ್ರೀಕರಣ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ABOUT THE AUTHOR

...view details