ಶಿವಮೊಗ್ಗ: ನನ್ನ ಕಂಡರೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಭಯ ಏಕೆ ಎಂದು ಅರ್ಥವಾಗುತ್ತಿಲ್ಲ ಎಂದು ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ವಿನಯ ಕೆ.ಸಿ ರಾಜಾವತ್ ಹೇಳಿದರು.
ನನ್ನ ಕಂಡರೆ ಸಿಎಂಗೆ ಏಕೋ ಭಯ: ವಿನಯ ಕೆ.ಸಿ ರಾಜಾವತ್ - ಸಿಎಂ ಬಿಎಸ್ವೈ ವಿರುದ್ಧ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ಆರೋಪ
ರಾಜ್ಯದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಅಭಿವೃದ್ಧಿ ನೋಡಿ ಅಥವಾ ಅವರ ಮುಖ ನೋಡಿ ಜನರು ಮತ ನೀಡಿಲ್ಲ ,ಅವರು ನೀಡಿರುವ ಗಾಂಧಿ ನೋಟು ನೋಡಿ ಮತ ನೀಡಿದ್ದಾರೆ ಎಂದು ವಿನಯ ಕೆ.ಸಿ ರಾಜಾವತ್ ಆರೋಪಿಸಿದ್ದಾರೆ.
ಶಿವಮೊಗ್ಗ
ರಾಜ್ಯದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಅಭಿವೃದ್ಧಿ ನೋಡಿ ಅಥವಾ ಅವರ ಮುಖ ನೋಡಿ ಜನರು ಮತ ನೀಡಿಲ್ಲ. ಅವರು ನೀಡಿರುವ ಗಾಂಧಿ ನೋಟು ನೋಡಿ ಮತ ನೀಡಿದ್ದಾರೆ ಎಂದು ದೂರಿದರು. ಯಡಿಯೂರಪ್ಪ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಸ್ವ ಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮಾಡದೇ ,ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಇದ್ದರೆ , ವಿದ್ಯಾರ್ಥಿ ಸಂಘಟನೆ ಮೂಲಕ ತ್ರಿಕೋನ ಚಳವಳಿ ಹಮ್ಮಿಕೊಂಡು ಸರ್ಕಾರ ಉರುಳಿಸುತ್ತೇವೆ ಎಂದು ಎಚ್ಚರಿಸಿದರು.