ಕರ್ನಾಟಕ

karnataka

ETV Bharat / state

ಉದಯಪುರ ಹತ್ಯೆ ಖಂಡಿಸಿ ವಿನಯ್​ ಗುರೂಜಿ ಹೇಳಿಕೆ - vinay guruji talk about udaipur murder case in shivamogga

ಇತ್ತೀಚಿನ​ ಹತ್ಯೆ ಬಗ್ಗೆ ಮಾತನಾಡಿದ ವಿನಯ್​ ಗುರೂಜಿ, ಎಲ್ಲ ಧರ್ಮ ಗ್ರಂಥಗಳಲ್ಲಿ ಮನುಷ್ಯತ್ವ ಮತ್ತು ಎಲ್ಲರನ್ನು ಪ್ರೀತಿಸಿ ಎಂದು ಹೇಳಲಾಗಿರುತ್ತದೆ. ಹನ್ನೊಂದು ಗಂಟೆಗೆ ಮಹಿಳೆಯರು ಭಯಮುಕ್ತರಾಗಿ ಓಡಾಡಬೇಕು ಎಂದು ಮಹಾತ್ಮ ಗಾಂಧೀಜಿ ಆಸೆ ಪಟ್ಟಿದ್ದರು. ಅಂತಹ ಭಾರತದಲ್ಲಿ ಹಾಡಹಗಲೇ ಕೊಲೆಯಾಗುತ್ತಿವೆ ಎಂದು ಹೇಳಿದರು.

vinay guruji
ಉದಯಪುರ ಹತ್ಯೆ ಖಂಡಿಸಿ ವಿನಯ್​ ಗುರೂಜಿ ಹೇಳಿಕೆ

By

Published : Jul 1, 2022, 8:17 AM IST

ಶಿವಮೊಗ್ಗ:ದೇಶದಲ್ಲಿ ಮತೀಯ ಕೊಲೆಗಳು ಆತಂಕ ಮೂಡಿಸಿರುವ ಬಗ್ಗೆ ಹಾಗೂ ಉದಯಪುರದ ಟೇಲರ್ ಹತ್ಯೆ ಕುರಿತು ಗೌರಿಗದ್ದೆ ವಿನಯ್ ಗುರೂಜಿ ಆತಂಕ ವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮನುಷ್ಯತ್ವ, ಪ್ರೀತಿ ಬೋಧಿಸದ ಧರ್ಮ ಗ್ರಂಥಗಳಿಲ್ಲ ಎಂದರು.

ಧರ್ಮ ಎಂದರೇನು.? ಎಲ್ಲಾ ಧರ್ಮ ಗ್ರಂಥದಲ್ಲೂ ಮೂಲ ತಿರುಳು ಅಂತ ಇದೆ.‌ ಮನುಷ್ಯತ್ವ ಹಾಗೂ ಎಲ್ಲರನ್ನೂ ಪ್ರೀತಿಸಿ ಎಂದಿರುತ್ತದೆ. ನಾನು ನೋಡಿದ ಎಲ್ಲ ಗ್ರಂಥದಲ್ಲಿ ಇದೇ ತರಹ ಇದೆ, ಹೊಸತಾಗಿ ಏನಾದರೂ ಸೇರ್ಪಡೆಯಾಗಿದೆಯಾ ಗೊತ್ತಿಲ್ಲ.

ಉದಯಪುರ ಹತ್ಯೆ ಖಂಡಿಸಿ ವಿನಯ್​ ಗುರೂಜಿ ಹೇಳಿಕೆ

ಯಾರು ಇಂತಹ ಕೃತ್ಯಗಳನ್ನು ಎಸಗುತ್ತಾರೊ ಅವರು ಮುಸ್ಲಿಂ ಅಲ್ಲ, ಹಿಂದೂ ಕೂಡ ಕೊಲೆ ಮಾಡಿದರೆ ಆತ ಸಹ ಹಿಂದೂ ಅಲ್ಲ. ಎಲ್ಲ ಧರ್ಮದಲ್ಲಿ ಶಾಂತಿ ಮಂತ್ರಗಳನ್ನೇ ಹೇಳಿರೋದು. ಭಾಷೆ ಬೇರೆ ಇರಬಹುದು ಆದರೆ ಭಾವ ಒಂದೇ ಇರುತ್ತದೆ. ಭಾವ ಅರ್ಥ ಮಾಡಿಕೊಳ್ಳಬೇಕು.

ಹಿಂದೂ ತಪ್ಪು ಮಾಡಿದಾಗ, ರಾಜಕೀಯ ಪಕ್ಷಗಳು, ಸ್ವಾಮೀಜಿಗಳು ನಿಷ್ಠೂರವಾಗಿ ಕ್ರಮ ಕೈಗೊಳ್ಳಬೇಕು. ಮುಸ್ಲಿಂ ತಪ್ಪು ಮಾಡಿದರೆ ಮುಸ್ಲಿಂ ಗುರುಗಳು, ಮುಖಂಡರು ಕ್ರಮ ಕೈಗೊಳ್ಳಬೇಕು. ಧರ್ಮ ಮೊದಲು, ಆಮೇಲೆ ಜನ. ಯಾರೇ ಯಾವ ಧರ್ಮೀಯನೇ ತಪ್ಪು ಮಾಡಲಿ, ಆತನ ಮೇಲೆ ಕಠಿಣ ಕ್ರಮ ತೆಗೆದುಕೊಂಡಾಗ ಇನ್ನೊಬ್ಬ ಆ ತರಹ ಕೆಲಸ ಮಾಡೋದಿಲ್ಲ.

ಪ್ರಚೋದನೆ ಮಾಡಬೇಡಿ:ಕೊಲೆ ಮಾಡಿ ಸೋಷಿಯಲ್ ಮೀಡಿಯಾಕ್ಕೆ ಹಾಕಿದ್ರೆ ಇನ್ನೊಂದಿಷ್ಟು ಜನರಿಗೆ ಪ್ರಚೋದನೆ ಸಿಕ್ಕಹಾಗೆ ಆಗುತ್ತೆ. ಕುತ್ತಿಗೆ ಕೊಯ್ಯೋದು ಸುಲಭ , ಇನ್ನೊಬ್ಬರ ಪ್ರಾಣ ತೆಗೆಯುವ ಅಧಿಕಾರ ಯಾರಿಗೂ ಇಲ್ಲ. ಧರ್ಮ - ದೇಶ ಮೀರಿದ್ದು ಮನುಷ್ಯತ್ವ..! ನಾವು ಮನುಷ್ಯರಾಗಿ ವರ್ತಿಸೋದು ಕಲಿಯೋಣ. ಧರ್ಮದ ಹೆಸರಲ್ಲಿ ತಪ್ಪು ಮಾಡಿದರೆ ಜನರೇ ಅಂತವರನ್ನು ಪೊಲೀಸ್ ಠಾಣೆಗೆ ಒಪ್ಪಿಸಬೇಕು. ಯಾವುದ್ಯಾವುದಕ್ಕೋ ನಾವು ಪ್ರತಿಭಟನೆ ಮಾಡ್ತೀವಿ. ಏನಕ್ಕೋ ಹೋರಾಡ್ತೀವಿ.

ಗಾಂಧೀಜಿ ಕಂಡ ಆಸೆ ಏನಾಗುತ್ತಿದೆ?:ರಾತ್ರಿ ಹನ್ನೊಂದು ಗಂಟೆಗೆ ಮಹಿಳೆಯರು ಭಯಮುಕ್ತರಾಗಿ ಓಡಾಡಬೇಕು ಎಂದು ಮಹಾತ್ಮ ಗಾಂಧೀಜಿ ಆಸೆ ಪಟ್ಟಿದ್ದರು. ಅಂತಹ ಭಾರತದಲ್ಲಿ ಹಾಡಹಗಲೇ ಕೊಲೆಯಾಗುತ್ತೆ ಎಂದಾಗ, ಯುವಕರು ದನಿ ಎತ್ತಬೇಕು. ನಾವು ಸುಮ್ಮನಿದ್ದರೆ ಆಗದು, ಇವತ್ತು ಅವರ ಮನೆಯಲ್ಲಿ ಆಗುತ್ತೆ, ನಾಳೆ ನಿಮ್ಮ ಮನೆಯಲ್ಲಿ ಆಗುತ್ತೆ.

ನಗರಗಳಲ್ಲಿ ಇದು ಹುಚ್ಚಾಟ, ನಮಗೇಕೆ ಪಕ್ಕದವರ ಮನೆ ಸುದ್ದಿ ಅಂತ ಸುಮ್ಮನಾಗುತ್ತೇವೆ. ಪಕ್ಕದಮನೆಯಿಂದಲೇ ಬೆಂಕಿ ನಮ್ಮ ಮನೆಗೆ ಹತ್ತಿಕೊಳ್ಳೋದು. ಇಂಥವರು ಯಾವುದೇ ಧರ್ಮದಲ್ಲಿದ್ದರೂ ಅಂತವರನ್ನು ಕಾನೂನಿಗೆ ಒಪ್ಪಿಸುವದರಲ್ಲಿ ಯಾವುದೇ ತಪ್ಪಿಲ್ಲ, ನಾವು ಆ ಕೆಲಸ ಮಾಡೋಣ ಎಂದು ವಿನಯ್ ಗುರೂಜೀ ಹೇಳಿದರು.

ಇದನ್ನೂ ಓದಿ:ರಾಜ್ಯದಲ್ಲಿ ನಿನ್ನೆಗಿಂತ ಇಂದು ಕೊಂಚ ತಗ್ಗಿದ ಕೋವಿಡ್​ ಸೋಂಕು

For All Latest Updates

TAGGED:

ABOUT THE AUTHOR

...view details