ಶಿವಮೊಗ್ಗ:ಊರಿನಲ್ಲಿ ಸ್ಮಶಾನವಿಲ್ಲದ ಕಾರಣ ಗ್ರಾಮ ಪಂಚಾಯಿತಿ ಆವರಣದಲ್ಲೇ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ ಘಟನೆ ಶಿವಮೊಗ್ಗ ತಾಲೂಕಿನ ಸಂತೆ ಕಡೂರು ಗ್ರಾಮದಲ್ಲಿ ನಡೆದಿದೆ. ಈ ಹಿಂದೆ ಸಂತೆ ಕಡೂರು ಗ್ರಾಮದ ಸ್ಮಶಾನಕ್ಕೆ ಮಂಜೂರಾಗಿದ್ದ ಮೂರು ಎಕರೆ ಜಾಗದಲ್ಲಿ ಕೆಲವರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.
ಕಳೆದ ವಾರ ಉಳಿದ ಜಾಗವನ್ನು ಸರ್ವೇ ಮಾಡಲು ಅಧಿಕಾರಿಗಳು ಹೋದಾಗ ಅಲ್ಲಿದ್ದವರು ಪ್ರತಿಭಟಿಸಿ ಅವರನ್ನು ವಾಪಸ್ ಕಳುಹಿಸಿದ್ದರು. ಇಂದು ಸಂತೆ ಕಡೂರು ಎ ಕೆ ಕಾಲೋನಿಯಲ್ಲಿ ರಂಗಮ್ಮ ಎನ್ನುವರು ಮೃತ ಪಟ್ಟಿದ್ದರು. ಅವರ ಶವಸಂಸ್ಕಾರವನ್ನು ಸರ್ಕಾರದಿಂದ ಮಂಜೂರಾದ ಜಾಗದಲ್ಲಿ ಮಾಡಲು ಕುಟುಂಬದವರು ಹಾಗೂ ಸಂಬಂಧಿಕರು ಮುಂದಾಗಿದ್ದಾರೆ.