ಕರ್ನಾಟಕ

karnataka

ETV Bharat / state

ಸಿಎಂ ಸ್ವಕ್ಷೇತ್ರದಲ್ಲೇ ಜನರಿಗೆ ಕಲುಷಿತ ನೀರು: ಹತ್ತಾರು ವರ್ಷವಾದ್ರೂ ತೊಳೆದಿಲ್ಲವಂತೆ ಈ ಟ್ಯಾಂಕ್​​ - ಶಿಕಾರಿಪುರ ಗ್ರಾಮಸ್ಥರ ಪ್ರತಿಭಟನೆ

ಚರಂಡಿಯಲ್ಲಿ ಹರಿಯುವಂತಹ ನೀರನ್ನು ಪೂರೈಸಲಾಗುತ್ತಿದೆ. ಟ್ಯಾಂಕರ್​ ಕಟ್ಟಿದಾಗಿನಿಂದ ಗ್ರಾಮ ಪಂಚಾಯತ್​ನವ ಸ್ವಚ್ಛಗೊಳಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ. ಇದರಿಂದ ಕಲುಷಿತ ನೀರು ಕುಡಿದ ಕೆಲವರು ಆಸ್ಪತ್ರೆಗೆ ಸೇರಿದ್ದಾರೆ. ಇದು ಸಿಎಂ ಯಡಿಯೂರಪ್ಪ ಕ್ಷೇತ್ರದಲ್ಲಿರುವ ಹೊಸಮುಗುಳ್ಗೆರೆ ಗ್ರಾಮಸ್ಥರ ಆರೋಪ.

ಶಿಕಾರಿಪುರ ತಾಲೂಕಿನಲ್ಲಿ ಕಲುಷಿತ ನೀರು ಸರಬರಾಜು

By

Published : Oct 13, 2019, 1:15 PM IST

ಶಿವಮೊಗ್ಗ: ಕಲುಷಿತ ನೀರು ಸರಬರಾಜು ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಸಿಎಂ ಯಡಿಯೂರಪ್ಪ ಅವರ ಕ್ಷೇತ್ರದಲ್ಲಿರುವ ಹೊಸಮುಗುಳ್ಗೆರೆ ಗ್ರಾಮದಲ್ಲಿ ನಡೆದಿದೆ.

ಇಂದು ನೀರಿನ ಟ್ಯಾಂಕ್​ ಏರಿದ್ದ ಉದ್ರಿಕ್ತ ಗ್ರಾಮಸ್ಥರು ಪ್ರತಿಭಟನೆ ಮಾಡಿ ಗ್ರಾಮಪಂಚಾಯತ್​ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಸರಬರಾಜು ಮಾಡುವ ನೀರಿನ ಟ್ಯಾಂಕ್​ನ್ನು ಸ್ವಚ್ಛಗೊಳಿಸದ ಹಿನ್ನೆಲೆ ಕಲುಷಿತ ನೀರನ್ನು ಕುಡಿದ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತ್​ ಅಧಿಕಾರಿಗಳಿಗೆ ಜನ ಹಿಡಿಶಾಪ ಹಾಕಿದ್ದಲ್ಲದೆ, ಗ್ರಾ.ಪಂ ಕಚೇರಿಗೆ ಮುತ್ತಿಗೆ ಹಾಕಿದ್ದರು.

ಶಿಕಾರಿಪುರ ತಾಲೂಕಿನಲ್ಲಿ ಕಲುಷಿತ ನೀರು ಸರಬರಾಜು ಆರೋಪ

ಚರಂಡಿಯಲ್ಲಿ ಹರಿಯುವಂತಹ ನೀರನ್ನು ಗ್ರಾಮಸ್ಥರಿಗೆ ಕುಡಿಯಲು ಪೂರೈಸಲಾಗುತ್ತಿದೆ. ಟ್ಯಾಂಕರ್​ ಕಟ್ಟಿದಾಗಿನಿಂದ ಗ್ರಾಮ ಪಂಚಾಯತ್​ಯವರು ಸ್ವಚ್ಛಗೊಳಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೂಡಲೇ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಟ್ಯಾಂಕ್​ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

ABOUT THE AUTHOR

...view details