ಕರ್ನಾಟಕ

karnataka

ನೀರಿನ ಪೈಪ್​​ಲೈನ್​​​ ತೆರವಿಗೆ ಆದೇಶಿಸಿದ ಅರಣ್ಯಾಧಿಕಾರಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

By

Published : Jun 28, 2019, 2:33 PM IST

ಅರಣ್ಯಾಧಿಕಾರಿ ಕ್ರಮವನ್ನು ಖಂಡಿಸಿ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಉಂಬ್ಳೆಬೈಲು ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆ


ಶಿವಮೊಗ್ಗ: ಅರಣ್ಯಾಧಿಕಾರಿ ಕ್ರಮವನ್ನು ಖಂಡಿಸಿ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಶಿವಮೊಗ್ಗ ತಾಲೂಕಿನ ಉಂಬ್ಳೆಬೈಲು ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.

ಉಂಬ್ಳೆಬೈಲು ವಲಯದಲ್ಲಿ ಬರುವ ಅರಣ್ಯದ ಪ್ರದೇಶದಲ್ಲಿ ಐದಾರು ಗ್ರಾಮಗಳಿಗೆ ಕುಡಿಯುವ ನೀರಿನ ಪೈಪ್​ಲೈನ್​ ಆಳವಡಿಸಲಾಗಿದೆ. ಪೈಪ್​ಲೈನ್​ ಅಳವಡಿಕೆಗೆ ಈ ಹಿಂದೆ ಅರಣ್ಯಾಧಿಕಾರಿಗಳು ಒಪ್ಪಿಗೆ ನೀಡಿದ್ರು. ಆದರೆ, ಈಗಿರುವ ಅರಣ್ಯಾಧಿಕಾರಿ ಮಹೇಶ್ ನಾಯ್ಕ ಅವರು ಕುಡಿಯುವ ನೀರಿನ ಪೈಪ್​ಲೈನ್​ ತೆರವುಗೊಳಿಸುವಂತೆ ಆದೇಶಿಸಿದ್ದಾರೆ ಎನ್ನಲಾಗ್ತಿದೆ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಅರಣ್ಯಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಉಂಬ್ಳೆಬೈಲು ವ್ಯಾಪ್ತಿಗೆ ಒಳಪಡುವ ಐದಾರು ಹಳ್ಳಿಗಳಿಗೆ ಹಾಗೂ ಉಂಬ್ಳೆಬೈಲು ಗ್ರಾಮಕ್ಕೆ ತುಂಗಾ ನದಿಯ ಹಿನ್ನೀರಿನಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಆದರೆ, ನೀರಿನ ಪೂರೈಕೆಗೆ ವಿದ್ಯುತ್ ಸಂಪರ್ಕ ನೀಡುವುದರಿಂದ ವನ್ಯಜೀವಿಗಳು ನೀರು ಕುಡಿಯಲು ಆಗಮಿಸಿದ ವೇಳೆ ಹಾನಿ ಉಂಟಾಗುತ್ತೆ ಎಂದು ನೀರಿನ ಪೈಪ್ ಲೈನ್ ಹಾಗೂ ವಿದ್ಯುತ್ ಲೈನ್​​ನನ್ನು ತರೆವು ಮಾಡಬೇಕು ಎಂದು ಮೆಸ್ಕಾಂನವರಿಗೆ ಅರಣ್ಯಾಧಿಕಾರಿ ಮಹೇಶ್ ನಾಯ್ಕ ಅವರು ನೋಟಿಸ್ ನೀಡಿದ್ದಾರಂತೆ.

ಉಂಬ್ಳೆಬೈಲು ವ್ಯಾಪ್ತಿಯ ಗ್ರಾಮಸ್ಥರ ಪ್ರತಿಭಟನೆ
ಅಧಿಕಾರಿಯ ಈ ನಡೆಯನ್ನು ವಿರೋಧಿಸುತ್ತಿರುವ ಉಂಬ್ಳೆಬೈಲು ಗ್ರಾಮಸ್ಥರು ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ದುಗ್ಗಪ್ಪ ಗೌಡ ನೇತೃತ್ವದಲ್ಲಿ ಅರಣ್ಯಾಧಿಕಾರಿ ಮಹೇಶ್ ನಾಯ್ಕ ನಮ್ಮ ಗ್ರಾಮಕ್ಕೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ABOUT THE AUTHOR

...view details