ಕರ್ನಾಟಕ

karnataka

ETV Bharat / state

ಫೆ.7 ಕ್ಕೆ ಮಾಲ್ಗುಡಿ ಡೇಸ್ ಚಿತ್ರ ತೆರೆಗೆ..ಶಿವಮೊಗ್ಗದಲ್ಲಿ ವಿಜಯ್​​ ರಾಘವೇಂದ್ರ ಪ್ರಚಾರ - ವಿಜಯ್​​ ರಾಘವೇಂದ್ರ ಶಿವಮೊಗ್ಗ ಭೇಟಿ ಸುದ್ದಿ

ವಿಜಯ ರಾಘವೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಮಾಲ್ಗುಡಿ ಡೇಸ್ ಚಿತ್ರ ಫೆಬ್ರವರಿ 7ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

vijayragavendra-in-shimogha
ಶಿವಮೊಗ್ಗದಲ್ಲಿ ವಿಜಯ್​​ ರಾಘವೇಂದ್ರ ಪ್ರಚಾರ

By

Published : Jan 29, 2020, 6:53 PM IST

ಶಿವಮೊಗ್ಗ :ವಿಜಯ ರಾಘವೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಮಾಲ್ಗುಡಿ ಡೇಸ್ ಚಿತ್ರ ಫೆಬ್ರವರಿ 7ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಚಿತ್ರದ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಮಾಲ್ಗುಡಿ ಡೇಸ್ ಚಿತ್ರದ ನಾಯಕ ವಿಜಯ ರಾಘವೇಂದ್ರ ಈಟಿವಿ ಭಾರತ ಜೊತೆ ಮಾತನಾಡಿ, ಚಿತ್ರದ ಪ್ರಚಾರ ಕಾರ್ಯ ಈಗಾಗಲೇ ಆರಂಭವಾಗಿದ್ದು, ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಲಾಗಿದೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಹಾಗೂ ನಂಬಿಕೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರುತ್ತಾರೆ. ಅವರ ನಿರೀಕ್ಷೆ ಹುಸಿಯಾಗಬಾರದು. ಇಡೀ ಚಿತ್ರತಂಡ ಸಾಕಷ್ಟು ಶ್ರಮಪಟ್ಟು ಚಿತ್ರವನ್ನು ನಿರ್ಮಿಸಿದೆ. ಪ್ರೇಕ್ಷಕರು ಚಿತ್ರಮಂದಿರದಲ್ಲಿ ಮಾಲ್ಗುಡಿ ಡೇಸ್ ವೀಕ್ಷಿಸುವುದರ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಶಿವಮೊಗ್ಗದಲ್ಲಿ ವಿಜಯ್​​ ರಾಘವೇಂದ್ರ ಪ್ರಚಾರ

ಈ ಹಿಂದೆ ಶಂಕರ್​​ನಾಗ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಾಲ್ಗುಡಿ ಡೇಸ್ ಧಾರವಾಹಿಗೂ ಇದೀಗ ತೆರೆಗೆ ಬರುತ್ತಿರುವ ಮಾಲ್ಗುಡಿ ಡೇಸ್‌ ಚಿತ್ರಕ್ಕೂ ಯಾವುದೇ ಹೋಲಿಕೆ ಇಲ್ಲ. ಸಂಪೂರ್ಣ ಹೊಸದಾದ ಕಥೆ, ಹೊಸದಾದ ಸಿನಿಮಾವಾಗಿ ಮಾಲ್ಗುಡಿ ಡೇಸ್ ಹೊರ ಬರುತ್ತಿದೆ ಎಂದರು. ಚಿತ್ರವನ್ನು ವೀಕ್ಷಿಸಿದಾಗ ನಮ್ಮ ಕಳೆದುಹೋದ ಜೀವನ, ಬದುಕು, ಸಂಬಂಧ, ಪ್ರೀತಿ, ಹಳೆಯ ವ್ಯಕ್ತಿತ್ವ ಇದೆಲ್ಲವೂ ನೆನಪಾಗುತ್ತದೆ. ಈಗಾಗಲೆ ಚಿತ್ರದ ಟೀಸರ್​​ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಟೀಸರ್​​ ವೀಕ್ಷಿಸಿದ ನಟರಾದ ರವಿಚಂದ್ರನ್, ಜಗ್ಗೇಶ್, ಪುನೀತ್ ರಾಜಕುಮಾರ್ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 1ರಂದು ಚಿತ್ರದ ವಿಶೇಷ ಟ್ರೈಲರ್ ಬಿಡುಗಡೆಯಾಗಲಿದೆ ಎಂದರು. ಮಾಲ್ಗುಡಿ ಡೇಸ್​ನಲ್ಲಿ ಎರಡು ರೀತಿಯ ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದೇನೆ. ಚಿತ್ರದಲ್ಲಿ ನನ್ನದು ಬಹಳ ಚಾಲೆಂಜಿಂಗ್ ಪಾತ್ರ, ಲಕ್ಷ್ಮೀನಾರಾಯಣ ಹೆಸರಿನ ಸಾಹಿತಿಯಾಗಿ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದೇನೆ. ಶಿವಮೊಗ್ಗ, ಸಕ್ರೆಬೈಲು, ಆಗುಂಬೆ, ತೀರ್ಥಹಳ್ಳಿ, ಕಳಸ, ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ವಿವಿಧ ಭಾಗದಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ABOUT THE AUTHOR

...view details