ಕರ್ನಾಟಕ

karnataka

ETV Bharat / state

ವಿಜಯೇಂದ್ರ ಎರಡು ಕ್ಷೇತ್ರದಲ್ಲಿ ನಿಲ್ಲೋದಿಲ್ಲ : ಸಂಸದ ಬಿ ವೈ ರಾಘವೇಂದ್ರ - ETV Bharat Kannada News

ಈ ಚುನಾವಣೆಯಲ್ಲಿ ನಮಗೆ ಪರಿಪೂರ್ಣ ಬಹುಮತ ಬರುತ್ತದೆ. 150 ಸೀಟುಗಳನ್ನು ನಾವು ಗೆಲ್ಲುತ್ತೇವೆ ಎಂದು ಎಂಪಿ ಬಿ ವೈ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಸದ ಬಿ ವೈ ರಾಘವೇಂದ್ರ
ಸಂಸದ ಬಿ ವೈ ರಾಘವೇಂದ್ರ

By

Published : Mar 29, 2023, 8:42 PM IST

ಸಂಸದ ಬಿ ವೈ ರಾಘವೇಂದ್ರ

ಶಿವಮೊಗ್ಗ : ಅಧಿಕೃತವಾಗಿ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ.‌ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ಬಿಜೆಪಿ ಪಕ್ಷದಿಂದ ಎಲ್ಲಾ ತಯಾರಿಗಳು ಆಗಿವೆ ಎಂದು ಸಂಸದ ಬಿ ವೈ ರಾಘವೇಂದ್ರ ಅವರು ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು, ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಸಂಘಟನಾ ಶಕ್ತಿ, ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಮಾಡಿದಂತಹ ಪ್ರವಾಸಗಳು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮಾವೇಶಗಳು ಜನರನ್ನ ಉತ್ತೇಜಿಸಲು ಅನುಕೂಲವಾಗಿವೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿವೆ ಎಂದರು.

150 ಸೀಟುಗಳನ್ನು ನಾವು ಗೆಲ್ಲುತ್ತೇವೆ : ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಪಕ್ಷ ಬಿಜೆಪಿ ಅಲ್ಲ. ನಮ್ಮ ಕಾರ್ಯಕರ್ತರು ಈಗಾಗಲೇ ಸನ್ನದ್ಧರಾಗಿದ್ದಾರೆ. ಈ ಚುನಾವಣೆಯಲ್ಲಿ ನಮಗೆ ಪರಿಪೂರ್ಣ ಬಹುಮತ ಬರುತ್ತದೆ. ಹಿಂದೆ ನಾಲ್ಕು ಬಾರಿ ಸರ್ಕಾರ ರಚನೆ ಮಾಡಿದಾಗಲೂ ನಮಗೆ ಪೂರ್ಣ ಬಹುಮತ ಸಿಕ್ಕಿರಲಿಲ್ಲ. ಈ ಸಲ ಬಂದೇ ಬರುತ್ತದೆ. 150 ಸೀಟುಗಳನ್ನು ನಾವು ಗೆಲ್ಲುತ್ತೇವೆ ಎಂದು ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಕೂಡ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ: ಬೈಂದೂರು ಸೇರಿಸಿಕೊಂಡು ಶಿವಮೊಗ್ಗ ಸಂಸತ್ ವ್ಯಾಪ್ತಿಯಲ್ಲಿ ಏಳು ಬಿಜೆಪಿ ಶಾಸಕರನ್ನ ನಾವು ಕೊಟ್ಟಿದ್ದೇವೆ. ಈ ಈ ಸಲ ಏಳು ಕ್ಷೇತ್ರಗಳನ್ನು ನಾವು ಉಳಿಸಿಕೊಳ್ಳುತ್ತೇವೆ. ಭದ್ರಾವತಿಯನ್ನು ಸೇರಿಸಿಕೊಂಡು ಒಟ್ಟು ಎಂಟು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದರು. ಈ ಬಾರಿ ಬಿಜೆಪಿಗೆ ಜನ ಮನ್ನಣೆ ಕೊಟ್ಟೇ ಕೊಡುತ್ತಾರೆ. ಎಲ್ಲಾ ಕಡೆ ಅಸಮಾಧಾನ ಇರುವುದು ಸಹಜ. ಆದರೆ ಈ ಪಕ್ಷ ಬಹಳ ದೊಡ್ಡವಾಗಿ ಬೆಳ್ಕೊಂಡಿದೆ. ಹೆಚ್ಚು ಆಸ್ತಿ ಇದ್ದಾಗ ಅಣ್ಣ ತಮ್ಮಂದಿರ ಮಧ್ಯೆ ಜಗಳ ಬರೋದು ಸಹಜ. ಪಕ್ಷ ಬೆಳೆದುಕೊಂಡಿದೆ. ನಾನು ಕೂಡ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದರು.

ಲೋಕಾಯುಕ್ತ ಬಲಪಡಿಸಿದ್ದು ನಾವೇ :ಸಂಸತ್ ಸದಸ್ಯನಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಬಿಜೆಪಿ ಕೊಟ್ಟಿದೆ. ಆ ಮೂಲಕ ನಾನು ತಿರುಗಿ ಕೆಲಸ ಮಾಡುತ್ತೇನೆ. ಭದ್ರಾವತಿಯಲ್ಲಿ ನಮ್ಮ ಅಭ್ಯರ್ಥಿ ಇಲ್ಲ ಎನ್ನುವುದು ತಪ್ಪು. ಸಂಘಟನೆ ಬಲವಾಗಿದೆ. 15 ದಿನಗಳಲ್ಲಿ ನಾವು ಮಾಡಬಲ್ಲೆವು. ಭ್ರಷ್ಟಾಚಾರ ಅಥವಾ ಯಾವುದೇ ವಿಷಯ ಕುರಿತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಲೋಕಾಯುಕ್ತ ಬಲಪಡಿಸಿದ್ದು ನಾವೇ ಎಂದರು.

ಜನರಿಗೆ ನಮ್ಮ ತಂದೆಯ ಅಪೇಕ್ಷೆ ಹಾಗೂ ನಮ್ಮ ಕಾರ್ಯಕರ್ತರ ಎಲ್ಲರ ಅಪೇಕ್ಷೆಯಂತೆ ಶಿಕಾರಿಪುರದಲ್ಲಿ ನಿಲ್ಲಬೇಕು ಎಂಬುದಾಗಿದೆ. ವರುಣಾದಲ್ಲಿ ನಿಲ್ಲುವ ಬಗ್ಗೆ ನಮಗೆ ಮಾಹಿತಿ ಇಲ್ಲ.‌ ಬಿಜೆಪಿ ಪಕ್ಷ ಯಾವತ್ತು ಎರಡು ಕ್ಷೇತ್ರಗಳಲ್ಲಿ ನಿಲ್ಲಿಸುವುದಿಲ್ಲ. ಹಾಗಾಗಿ ವಿಜಯೇಂದ್ರ ಶಿಕಾರಿಪುರದಲ್ಲಿ ನಿಲ್ಲುತ್ತಾರೆ ಎಂಬ ಸುಳಿವನ್ನು ಸಹೋದರ ಬಿ ವೈ ರಾಘವೇಂದ್ರ ಅವರು ಕೊಟ್ಟರು.

ಇದನ್ನೂ ಓದಿ :ಚುನಾವಣೆ ಎದುರಿಸಲು ಸನ್ನದ್ಧ, ಸ್ಪಷ್ಟ ಬಹುಮತ ಬಿಜೆಪಿಗೆ ಸಿಗಲಿದೆ : ಸಿಎಂ ಬೊಮ್ಮಾಯಿ‌

ABOUT THE AUTHOR

...view details