ಕರ್ನಾಟಕ

karnataka

ETV Bharat / state

ಸಹೋದರನ ಪರ ಬಿ.ವೈ.ವಿಜಯೇಂದ್ರ ಮತಬೇಟೆ - ಬಿ ವೈ ವಿಜಯೇಂದ್ರ

ನೆಹರು ಕ್ರೀಡಾಂಗಣದಲ್ಲಿ ವಾಕಿಂಗ್ ಮಾಡುವವರ ಬಳಿ ತಮ್ಮ ಸಹೋದರನಿಗೆ ಮತ ಹಾಕುವಂತೆ ಬಿ.ವೈ.ವಿಜಯೇಂದ್ರ ಮನವಿ ಮಾಡಿಕೊಂಡರು. ಬೆಳ್ಳಂಬೆಳಗ್ಗೆ ವಾಕಿಂಗ್​ಗೆ ಬಂದಿದ್ದವರ ಬಳಿ‌ ತೆರಳಿ ಜಿಲ್ಲೆ ಹಾಗೂ ದೇಶದ ಅಭಿವೃದ್ಧಿಗೆ ಬಿಜೆಪಿಗೆ ಮತ ಹಾಕುವಂತೆ ವಿನಂತಿ ಮಾಡಿಕೊಂಡರು.

ಬಿ ವೈ ವಿಜಯೇಂದ್ರ

By

Published : Apr 11, 2019, 7:24 PM IST

ಶಿವಮೊಗ್ಗ:ರಾಜ್ಯ ಬಿಜೆಪಿ ಯುವ ಮೊರ್ಚಾ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ತಮ್ಮ ಸಹೋದರ ಬಿ.ವೈ.ರಾಘವೇಂದ್ರ ಪರ ನಗರದಲ್ಲಿ ಪ್ರಚಾರ ನಡೆಸಿದರು.

ನೆಹರು ಕ್ರೀಡಾಂಗಣದಲ್ಲಿ ವಾಕಿಂಗ್ ಮಾಡುವವರ ಬಳಿ ತಮ್ಮ ಸಹೋದರನಿಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು. ಬೆಳ್ಳಂಬೆಳಗ್ಗೆ ವಾಕಿಂಗ್​ಗೆ ಬಂದಿದ್ದವರ ಬಳಿ‌ ತೆರಳಿ ಜಿಲ್ಲೆ ಹಾಗೂ ದೇಶದ ಅಭಿವೃದ್ಧಿಗೆ ಬಿಜೆಪಿಗೆ ಮತ ಹಾಕುವಂತೆ ವಿನಂತಿ ಮಾಡಿಕೊಂಡರು.

ವಾಕಿಂಗ್​ಗೆ ಬಂದಿದ್ದ ಎಲ್ಲಾ ವಯೋಮಾನದವರನ್ನು ಭೇಟಿ ಮಾಡಿ ಮತಯಾಚಿಸಿದರು. ನಂತರ ಒಳಂಗಾಣ ಕ್ರೀಡಾಂಗಣದಲ್ಲಿ ಆಟವಾಡುತ್ತಿದ್ದವರ ಬಳಿ ಹೋಗಿ ಬಿಜೆಪಿಯ ಗುರುತಿಗೆ ಮತ ಹಾಕುವ ಜೊತೆಗೆ ನಿಮ್ಮ ಕಡೆಯವರ ಮತಗಳನ್ನು ಬಿಜೆಪಿಗೆ ಹಾಕಿಸುವಂತೆ ವಿನಂತಿ ಮಾಡಿದರು. ನಂತರ ಕ್ರೀಡಾಂಗಣದ ಜಿಮ್​ಗೆ ಹೋಗಿ ಕಸರತ್ತು ನಡೆಸುತ್ತಿದ್ದ ಯುವಕರನ್ನು ಭೇಟಿ ಮಾಡಿ ತಮ್ಮ ಸಹೋದರನಿಗೆ ಮತ ನೀಡುವಂತೆ ಕೇಳಿದರು.

ಬಿ ವೈ ವಿಜಯೇಂದ್ರ ಪ್ರಚಾರ

ಈ ವೇಳೆ ಮಾತನಾಡಿದ ಅವರು, ದೇಶದಲ್ಲೆಡೆ ಬಿಜೆಪಿಯ ಗಾಳಿ ಬೀಸುತ್ತಿದೆ.‌ ಅದೇ ರೀತಿ‌ ಶಿವಮೊಗ್ಗದಲ್ಲೂ ಬಿಜೆಪಿಯ ಗಾಳಿ‌ ಬೀಸುತ್ತಿದೆ. ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅದೇ ರೀತಿ ರಾಘವೇಂದ್ರ ಉಪ ಚುನಾವಣೆಯ ನಂತರ ಜನ್​ಶತಾಬ್ದಿ ರೈಲು ಸಂಚಾರ, ಇಎಸ್ಐ ಆಸ್ಪತ್ರೆ ಶಂಕುಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಇದರಿಂದ ಜಿಲ್ಲೆಯ ಜನ ಈ ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details