ಶಿವಮೊಗ್ಗ: ರೈಲಿನಿಂದ ಕೆಳಗಿಳಿಯುವಾಗ ಆಯತಪ್ಪಿ ಬಿದ್ದ ಮಹಿಳೆಯನ್ನು ಪ್ಲಾಟ್ಫಾರ್ಮ್ನಲ್ಲಿ ರೈಲ್ವೆ ಪೊಲೀಸರು ತಕ್ಷಣವೇ ರಕ್ಷಿಸಿ ಪ್ರಾಣ ಉಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ತಾಳಗುಪ್ಪ- ಬೆಂಗಳೂರು ಇಂಟರ್ ಸಿಟಿ ರೈಲಿನಿಂದ ಮಹಿಳೆಯೂರ್ವರು ಇಳಿಯುವಾಗ ಆಯತಪ್ಪಿ ಪ್ಲಾಟ್ ಫಾರ್ಮ್ ಮೇಲೆ ಬಿದ್ದಿದ್ದರು.
ಅಲ್ಲಿಯೇ ಇದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಜಗದೀಶ್, ಸಂತೋಷ್ ಹಾಗೂ ಅಣ್ಣಪ್ಪ ತಕ್ಷಣವೇ ಪ್ಲಾಟ್ ಫಾರ್ಮ್ನಿಂದ ರೈಲಿನ ಹಳಿಗೆ ಬೀಳುವುದನ್ನು ತಡೆದಿದ್ದಾರೆ.