ಕರ್ನಾಟಕ

karnataka

ETV Bharat / state

ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್​​ನಲ್ಲಿ ಆಕಸ್ಮಿಕ ಬೆಂಕಿ: ರಿಪೇರಿಗೆಂದು ನಿಲ್ಲಿಸಿದ್ದ ವಾಹನಗಳು ಭಸ್ಮ - ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್​​ನಲ್ಲಿ ಆಕಸ್ಮಿಕ ಬೆಂಕಿ

ಶಿವಮೊಗ್ಗ ಆಟೋ ಕಾಂಪ್ಲೆಕ್ಸ್​​ನಲ್ಲಿ ರಿಪೇರಿಗೆಂದು ನಿಲ್ಲಿಸಿದ್ದ ವಾಹನಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಕೆಲವು ವಾಹನಗಳು ಸುಟ್ಟು ಭಸ್ಮವಾಗಿವೆ.

vehicle burn due to accidental fire in Shivamogga
ಆಕಸ್ಮಿಕ ಬೆಂಕಿ: ಹೊತ್ತಿ ಉರಿಯುತ್ತಿರುವ ವಾಹನಗಳು

By

Published : Jan 24, 2022, 7:07 AM IST

ಶಿವಮೊಗ್ಗ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ರಿಪೇರಿಗೆಂದು ನಿಲ್ಲಿಸಿದ್ದ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್​​ನಲ್ಲಿ ನಡೆದಿದೆ.

ಆಕಸ್ಮಿಕ ಬೆಂಕಿ: ಹೊತ್ತಿ ಉರಿಯುತ್ತಿರುವ ವಾಹನಗಳು

ರಿಪೇರಿಗೆಂದು ನಿಲ್ಲಿಸಿದ ಕಾರು, ಬಸ್​​ಗಳಿಗೆ ಬೆಂಕಿ ತಗುಲಿದೆ.‌ ನಿನ್ನೆ ಭಾನುವಾರ ಆದ ಕಾರಣ ಆಟೋ ಕಾಂಪ್ಲೆಕ್ಸ್ ನಲ್ಲಿ ಜನ ಸಂಚಾರ ವಿರಳವಾಗಿತ್ತು. ಹೀಗಾಗಿ ವಾಹನಗಳಿಗೆ ಬೆಂಕಿ ತಗುಲಿರುವ ವಿಚಾರ ಬೇಗ ತಿಳಿದಿಲ್ಲ. ಬಳಿಕ ಸ್ಥಳೀಯರು ಗಮನಿಸಿ ಪಾಲಿಕೆ ಸದಸ್ಯ ರಾಹುಲ್ ಅವರಿಗೆ ಮಾಹಿತಿ ನೀಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ತಕ್ಷಣ ಅವರು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಆಟೋ ಕಾಂಪ್ಲೆಕ್ಸ್​​ನಲ್ಲಿ ಗ್ಯಾರೇಜ್​ಗಳಿರುವುದರಿಂದ ರಿಪೇರಿಗೆಂದು ಕಾರು, ಬಸ್​​ಗಳು ಬರುತ್ತವೆ. ಹೀಗೆ ಬಂದ ವಾಹನಗನ್ನು ಗ್ಯಾರೇಜ್​ಗಳ ಮುಂದೆ ನಿಲ್ಲಿಸಲಾಗಿರುತ್ತದೆ.‌ ಹೀಗೆ ನಿಂತಿದ್ದ ವಾಹನಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ ಎನ್ನಲಾಗ್ತಿದೆ. ಈ ಕುರಿತು ವಿನೋಬ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೊಳ್ಳೇಗಾಲ: ಮೇಣದಬತ್ತಿಯಿಂದ ಹೊತ್ತಿಕೊಂಡ ಬೆಂಕಿ.. ನಶೆಯಲ್ಲಿ ಮಲಗಿದ್ದ ವೃದ್ಧ ದುರ್ಮರಣ

ABOUT THE AUTHOR

...view details