ಶಿವಮೊಗ್ಗ: ಡಕ್... ಡಕ್...ಅಂತ ಶಬ್ದಕ್ಕೆ ನೆರೆದಿದ್ದ ಸಾರ್ವಜನಿಕರಿಂದ ಸಿಳ್ಳೆ, ಕೇಕೆಗಳ ಸುರಿಮಳೆ. ಹೀಗೆ ಟಗರು ಕಾಳಗದ ಸದ್ದು ಕೇಳಿ ಬಂದಿದ್ದು, ನಗರದ ಕೋಟೆ ಮಾರಿಕಾಂಬ ಜಾತ್ರೆಯಲ್ಲಿ. ಆ ಭರ್ಜರಿ ಫೈಟ್ ಇಲ್ಲಿದೆ ನೋಡಿ.
ಮೈನವಿರೇಳಿಸಿದ ಟಗರು ಕಾಳಗ: ಚಪ್ಪಾಳೆ, ಕೇಕೆಗಳ ಅಬ್ಬರ - Various affair as part of the fair in shivamogg
ನಗರದ ವಿಜ್ಞಾನ ಮೈದಾನದಲ್ಲಿ ಮಾರಿಕಾಂಬ ಗೆಳೆಯರ ಬಳಗದಿಂದ ಜಾತ್ರೆ ಪ್ರಯುಕ್ತ 6ನೇ ರಾಜ್ಯ ಮಟ್ಟದ ಟಗರು ಕಾಳಗವನ್ನು ಆಯೋಜಿಸಲಾಗಿತ್ತು. ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬ ಜಾತ್ರೆಗೆ ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು ಮತ್ತು ಎಂಟು ಹಲ್ಲು ಟಗರುಗಳ ಕಾಳಗವನ್ನು ನಡೆಸಲಾಯಿತು.
![ಮೈನವಿರೇಳಿಸಿದ ಟಗರು ಕಾಳಗ: ಚಪ್ಪಾಳೆ, ಕೇಕೆಗಳ ಅಬ್ಬರ Various affair as part of the fair in shivamogg](https://etvbharatimages.akamaized.net/etvbharat/prod-images/768-512-6180888-thumbnail-3x2-sm.jpg)
ನಗರದ ವಿಜ್ಞಾನ ಮೈದಾನದಲ್ಲಿ ಮಾರಿಕಾಂಬ ಗೆಳೆಯರ ಬಳಗದಿಂದ ಜಾತ್ರೆ ಪ್ರಯುಕ್ತ 6ನೇ ರಾಜ್ಯ ಮಟ್ಟದ ಟಗರು ಕಾಳಗವನ್ನು ಆಯೋಜಿಸಲಾಗಿತ್ತು. ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬ ಜಾತ್ರೆಗೆ ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು ಮತ್ತು ಎಂಟು ಹಲ್ಲು ಟಗರುಗಳ ಕಾಳಗವನ್ನು ನಡೆಸಲಾಯಿತು.
ಹಾವೇರಿ, ದಾವಣಗೆರೆ, ಬೆಳಗಾವಿ, ಗದಗ, ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಟಗರು ಕಾಳಗಕ್ಕೆ ಆಗಮಿಸಿದ್ದರು. ಜಯದ ಕಿರೀಟ ಹೊತ್ತ ಟಗರು ಮಾಲೀಕರಿಗೆ ಆಕರ್ಷಕ ಬಹುಮಾನ ಕೂಡ ನೀಡಲಾಗಿತ್ತು. ಪ್ರಥಮ ಬಹುಮಾನ ₹ 30 ಸಾವಿರದಿಂದ 8 ಸಾವಿರದವರೆಗೂ ಆಯಾ ಹಂತದ ಸ್ಫರ್ಧೆಗಳಿಗೆ ಬಹುಮಾನ ನೀಡಲಾಗಿದೆ.