ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ವಿತರಕರ ಸಂಘದಿಂದ ಉತ್ಸವ -2020 ಕಾರ್ಯಕ್ರಮವನ್ನು ಫೆ.2ರಂದು ಸಂಜೆ 5.ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ವಿತರಕರ ಸಂಘದಿಂದ ಉತ್ಸವ -2020 ಕಾರ್ಯಕ್ರಮದ ಬಗ್ಗೆ ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಶಿವರಾಜ್ ಉಡಗಣಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ವ್ಯವಹಾರಗಳ ಬಗ್ಗೆ ನಮ್ಮ ವರ್ತಕರಿಗೆ ತಿಳಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶಿವಮೊಗ್ಗದಲ್ಲಿ ಜಿಲ್ಲಾ ವಿತರಕರ ಸಂಘದಿಂದ ಉತ್ಸವ -2020 ಆನ್‍ಲೈನ್ ವ್ಯವಹಾರಗಳ ಸ್ಪರ್ಧಾತ್ಮಕ ಯುಗದಲ್ಲಿ ವರ್ತಕರು ಮತ್ತು ವಿತರಕರು ಎದುರಿಸುವ ಸವಾಲುಗಳನ್ನು ನಾವು ಹೇಗೆ ಎದುರಿಸಬೇಕು ಮತ್ತು ಹೇಗೆ ಬೆಳೆಯಬೇಕು ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಮತ್ತು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಕಾರ್ಯಾಗಾರವನ್ನು ಬಿಸಿನೆಸ್ ಗುರು ಎಂದೇ ಹೆಸರಾಗಿರುವ ರಾಕೇಶ್ ಜೈನ್ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಲ್ಲದೇ ಆಧುನಿಕ ವ್ಯವಹಾರ-ಸವಾಲುಗಳು ಮತ್ತು ಪರಿಹಾರ ಮಾರ್ಗಗಳು ವಿಷಯ ಕುರಿತ ಉಪನ್ಯಾಸವನ್ನು ಕೂಡ ನೀಡಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್, ಇನ್ನೂ ಮುಂತಾದವರು ಆಗಮಿಸಲಿದ್ದಾರೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷ ಶಿವರಾಜ್ ಉಡುಗಣಿ ವಹಿಸಲಿದ್ದಾರೆ. ಇಂದಿನ ಸುದ್ದಿಗೋಷ್ಠಿಯಲ್ಲಿ ಮೋಹನ್,ಬದ್ರಿನಾಥ್, ಶ್ರೀನಿವಾಸ್,ದೇವರಾಜ್ ಉಪಸ್ಥಿತರಿದ್ದರು.