ಕರ್ನಾಟಕ

karnataka

ETV Bharat / state

ಗಾಂಜಾ ಸೇವನೆ ಪತ್ತೆಗೆ ಹೊಸ ಪ್ಲಾನ್​.. ಟೆಸ್ಟ್ ಕಿಟ್ ಮೊರೆ ಹೋದ ಶಿವಮೊಗ್ಗ ಪೊಲೀಸರು - ಶಿವಮೊಗ್ಗ ಪೊಲೀಸ್​ ಅಧಿಕಾರಿಗಳು

ಗಾಂಜಾ ಸೇವನೆ ಮಾಡುವವರನ್ನು ಪತ್ತೆ ಮಾಡುವುದೇ ಶಿವಮೊಗ್ಗ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇದೀಗ ಮಾದಕ ವ್ಯಸನಿಗಳನ್ನು ಪತ್ತೆಹಚ್ಚಲು ಪೊಲೀಸರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಗಾಂಜಾ ಟೆಸ್ಟ್ ಕಿಟ್ ಕುರಿತು ಮಾಹಿತಿ ನೀಡಿದ ಎಸ್​ಪಿ ಲಕ್ಷ್ಮೀಪ್ರಸಾದ್
Using ganja test kit in Shivamogga for detection of marijuana consumption

By

Published : Oct 10, 2021, 12:12 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು, ಮಾದಕ ವಸ್ತು ಸೇವನೆ ಮಾಡುವವರನ್ನು ಪತ್ತೆ ಹಚ್ಚುವುದೇ ದೊಡ್ಡ ತಲೆನೋವಾಗಿತ್ತು. ಈ ಹಿನ್ನೆಲೆ ಇದೀಗ ಪೊಲೀಸ್​ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಗಾಂಜಾ ಟೆಸ್ಟ್ ಕಿಟ್ ಮೊರೆಹೋಗಿದ್ದಾರೆ.

ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಂಜಾ ಟೆಸ್ಟಿಂಗ್ ಕಿಟ್ ಇಟ್ಟಿರುವ ಪೊಲೀಸರು, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಗಾಂಜಾ ಸೇವನೆ ಮಾಡುವವರನ್ನು ಪತ್ತೆಹಚ್ಚಲಾರಂಭಿಸಿದ್ದಾರೆ. ಟೆಸ್ಟಿಂಗ್ ಕಿಟ್ ಇಟ್ಟ ಕೆಲವೇ ದಿನದಲ್ಲಿ ಪಾಸಿಟಿವ್ ಬಂದ 9 ಜನರನ್ನು ಪೊಲೀಸರು ಬಂಧಿಸಿದ್ದು, 8 ಕೇಸ್​ ದಾಖಲಾಗಿವೆ.

ಹೇಗೆ ಪರೀಕ್ಷಿಸುವುದು?:

ಗಾಂಜಾ ಮಾರಾಟದ ಬಗ್ಗೆ ಹೆಚ್ಚು ದೂರು ಬಂದ ಏರಿಯಾಗಳನ್ನೇ ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ಗಾಂಜಾ ಸೇವಿಸಿರಬಹುದು ಎಂಬ ಅನುಮಾನ ಬಂದ ಯುವಕರನ್ನು ಕರೆತಂದು ಯೂರಿನ್ ಟೆಸ್ಟ್ ಅನ್ನು ಗಾಂಜಾ ಪತ್ತೆ ಕಿಟ್ ಮೂಲಕ ಮಾಡಲಾಗುತ್ತಿದೆ. ಒಂದು ವೇಳೆ ಟೆಸ್ಟಿಂಗ್ ಕಿಟ್​ನಲ್ಲಿ ಪಾಸಿಟಿವ್ ಬಂದರೆ, ಆ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಗಾಂಜಾ ಟೆಸ್ಟ್ ಕಿಟ್ ಕುರಿತು ಮಾಹಿತಿ ನೀಡಿದ ಎಸ್​ಪಿ ಲಕ್ಷ್ಮೀಪ್ರಸಾದ್

ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಸೇರಿದಂತೆ ಹಲವು ತಾಲೂಕುಗಳಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಶಿವಮೊಗ್ಗದ ಟಿಪ್ಪುನಗರ, ಆರ್​ಎಂಎಲ್ ನಗರ, ಅಣ್ಣಾ ನಗರ, ಸೂಳೆಬೈಲು ಭಾಗದಲ್ಲಿ ಗಾಂಜಾ ಹಾವಳಿ ಮಿತಿಮೀರಿದೆ. ಹೀಗಾಗಿ ಇದೀಗ ಪೊಲೀಸರು ಗಾಂಜಾ ಸೇವನೆ ಮಾಡುವವರು ಹಾಗೂ ಪೆಡ್ಲರ್​ಗಳ ಹೆಡೆಮುರಿಕಟ್ಟಲು ನೂತನ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ.

ABOUT THE AUTHOR

...view details